ಅಮರಾವತಿ: ಆಂಧ್ರ ಪ್ರದೇಶ ಸರ್ಕಾರವು ನವೆಂಬರ್ 1ರಂದು ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆಗೆ ಚಾಲನೆ ನೀಡಲಿದೆ.

ಅರ್ಹ ಫಲಾನುಭವಿಗಳಿಗೆ 'ದೀಪಂ-2' ಯೋಜನೆಯಡಿ ವಾರ್ಷಿಕವಾಗಿ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಾಗುವುದು.

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ನವೆಂಬರ್ 1ರಂದು ಶ್ರೀಕಾಕುಳಂದಲ್ಲಿ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಲಿದ್ದಾರೆ.

ಈಗಾಗಲೇ ಬುಕ್ ಮಾಡಿದ ಗ್ರಾಹಕರಿಗೆ ನಾಳೆಯಿಂದಲೇ ಸಿಲಿಂಡರ್ ಸರಬರಾಜು ಮಾಡಲಾಗುವುದು.

ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಆರು ಭರವಸೆಗಳಲ್ಲಿ ಉಚಿತ ಎಲ್ಪಿಜಿ ಯೋಜನೆ ಒಂದಾಗಿದೆ.

ಇದರ ಭಾಗವಾಗಿ ಪೆಟ್ರೋಲಿಯಂ ಕಂಪನಿಗಳಿಗೆ ಮೊದಲ ಸಿಲಿಂಡರ್ ವೆಚ್ಚದ ₹894 ಕೋಟಿ ಚೆಕ್ ಅನ್ನು ಮುಖ್ಯಮಂತ್ರಿ ನಾಯ್ಡು ಹಸ್ತಾಂತರಿಸಿದ್ದಾರೆ.

ಉಚಿತ ಎಲ್ಪಿಜಿ ಯೋಜನೆಯಡಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು ₹2,684 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಉಚಿತ ಅಡುಗೆ ಅನಿಲ ಸಿಲಿಂಡರ್ ಪೂರೈಸಲಾಗುವುದು.
.ಆಯುಷ್ಮಾನ್ ಭಾರತ: 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆಗೆ ಮಂಗಳವಾರ ಚಾಲನೆ?.ಕೊಡಗಿನಲ್ಲಿ LPG ಘಟಕ ಸ್ಥಾಪನೆ | ರಾಜ್ಯ ಸರ್ಕಾರಕ್ಕೆ ನೋಟಿಸ್: ಹೈಕೋರ್ಟ್ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.