ನವದೆಹಲಿ: ಭಾರತ ಪ್ರವಾಸ ಕೈಗೊಂಡಿದ್ದ ಕೋವಿಡ್ ಸೋಂಕಿತ ಇಟಲಿ ದಂಪತಿಗೆ ಜೈಪುರದಲ್ಲಿ ಎಚ್‌ಐವಿಗೆ ನಿರೋಧಕ ಔಷಧಗಳನ್ನು ಇದೇ ಮೊದಲ ಬಾರಿಗೆನೀಡಲಾಗಿದೆ. ದಂಪತಿಯ ಒಪ್ಪಿಗೆ ಪಡೆದೇ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎರಡನೇ ಹಂತದ ಎಚ್‌ಐವಿಗೆ ನೀಡಲಾಗುವ ಲೋಪಿನವೀರ್/ರಿಟೋನವೀರ್ ಸಂಯುಕ್ತ ಔಷಧವನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗಿದೆ. ರೋಗಿಗಳಿಬ್ಬರಿಗೆ ಮಾಹಿತಿ ನೀಡಿಯೇ ಔಷಧ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

‘ಎಚ್‌ಐವಿಗೆ ನಿರೋಧಕ ಔಷಧವನ್ನು ಚೀನಾದಲ್ಲಿ ಈಗಾಗಲೇ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿದೆ. ಇದೇನು ಹೊಸ ಔಷಧವೇನಲ್ಲ. ಇದರಿಂದ ಸಣ್ಣ ಪ್ರಮಾಣದ ಅಡ್ಡಪರಿಣಾಮಗಳಾಗುವುದು ನಿಜ. ಇದರಿಂದ ಪ್ರಯೋಜನವಾಗುತ್ತದೆ ಎಂಬುದು ಇದುವರೆಗೆ ಸಾಬೀತಾಗಿಲ್ಲ. ಆದರೆ, ಕೋವಿಡ್ ವಿರುದ್ಧ ಇದು ಹೊಸ ಬಗೆಯ ಚಿಕಿತ್ಸಾ ಕ್ರಮವಾಗಿದೆ. ಇದನ್ನು ರೋಗಿಗಳಿಗೆ ನೀಡುವುದಕ್ಕೂ ಮೊದಲು ಅವರಿಂದ ಒಪ್ಪಿಗೆ ಪಡೆಯಲಾಗುತ್ತದೆ. ಈಗಲೂ ಒಪ್ಪಿಗೆ ಪಡೆದೇ ನೀಡಲಾಗಿದೆ,’ ಎಂದು ವೈದ್ಯರು ತಿಳಿಸಿದ್ದಾರೆ.

‘ಇಟಲಿಯಿಂದ ಬಂದಿದ್ದ 69 ವರ್ಷ ಪ್ರಾಯದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿತ್ತು. ಅವರಿಗೆ ಚಿಕಿತ್ಸೆ ನೀಡಿದ ನಂತರ ಜ್ವರ ಹೋಗಿದೆ. ಅವರ ಆರೋಗ್ಯ ಉತ್ತಮವಾಗುತ್ತಿದೆ. ಅವರ ಪತ್ನಿಗೂ ಸೋಂಕು ತಗುಲಿತ್ತು. ಅವರೂ ಗುಣವಾಗುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು,’ ಎಂದು ರಾಜಸ್ಥಾನ ಸರ್ಕಾರದ ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಔಷಧ ಬಳಸಲು ಭಾರತೀಯ ಔಷಧ ಸಂಶೋಧನ ಕೇಂದ್ರ ಒಪ್ಪಿಗೆ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಿಳಿಸಿದ್ದಾರೆ.

ಅಲ್ಲದೆ, ಎಚ್‌ಐವಿ 2ನೇ ಹಂತದ ಚಿಕಿತ್ಸೆಯಲ್ಲಿ ನೀಡಲಾಗುವ ಔಷಧವನ್ನು ಕೋವಿಡ್ ಸೋಂಕು ಪೀಡಿತರ ಆರೈಕೆಯ ಉದ್ದೇಶಕ್ಕೆ ನೀಡಲು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ ಷರತ್ತು ಬದ್ಧ ಒಪ್ಪಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.