ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ542 ಸೀಟುಗಳಲ್ಲಿ 303 ಸೀಟು ಗೆದ್ದುಕೊಂಡಿದೆ. ಆದರೆ ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದರು ಇಲ್ಲ. ಪಶ್ಚಿಮ ಬಂಗಾಳದಲ್ಲಿ ಶೇ.27 ಮುಸ್ಲಿಮರಿದ್ದು ಇಲ್ಲಿಬಿಜೆಪಿ 2 ಸೀಟುಗಳನ್ನು ಮುಸ್ಲಿಮರಿಗೆ ನೀಡಿತ್ತು.ಶೇ. 95ರಷ್ಟು ಮುಸ್ಲಿಂ ಸಮುದಾಯವಿರುವ ಲಕ್ಷದ್ವೀಪದಲ್ಲಿ ಒಂದು ಸೀಟು ಮತ್ತು ಕಾಶ್ಮೀರದಲ್ಲಿ ಮೂರು ಸೀಟುಗಳಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.ಆದರೆ ಈ 6 ಸೀಟುಗಳಲ್ಲಿಯೂ ಬಿಜೆಪಿಗೆ ಗೆಲುವು ದಕ್ಕಲಿಲ್ಲ.

ಭಾರತದ ಜನಸಂಖ್ಯೆಯಲ್ಲಿ ಶೇ 13.4ರಷ್ಟು ಮುಸ್ಲಿಮರಿದ್ದಾರೆ. ಸಮುದಾಯವನ್ನಾಧರಿಸಿ ಲೋಕಸಭಾ ಸದಸ್ಯರನ್ನುಆಯ್ಕೆ ಮಾಡುವುದಿಲ್ಲವಾದರೂ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ 73 ಸಂಸದರು ಲೋಕಸಭೆಯಲ್ಲಿರಬೇಕಿತ್ತು.2014ರಲ್ಲಿ 23 ಮುಸ್ಲಿಂ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದು 2019ರಲ್ಲಿ ಆಯ್ಕೆಯಾದ ಮುಸ್ಲಿಂ ಸಂಸದರ ಸಂಖ್ಯೆ 26!

ಜಾರ್ಖಂಡ್,ಉತ್ತರಾಖಂಡ್, ಕರ್ನಾಟಕ, ದೆಹಲಿ ಮೊದಲಾದ ರಾಜ್ಯಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದರಿಲ್ಲ. ಇಲ್ಲಿರುವ ಮುಸ್ಲಿಂ ಜನಸಂಖ್ಯೆ ಜಾರ್ಖಂಡ್ (ಶೇ.14.5 ), ಉತ್ತರಾಖಂಡ್ (ಶೇ.13.9), ಕರ್ನಾಟಕ (ಶೇ.12.9) ಮತ್ತು ದೆಹಲಿ (ಶೇ.12.9) ಆಗಿದೆ.

ಭಾರತದಲ್ಲಿ ಸರಿಸುಮಾರು ಶೇ.46 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ.85 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು 720 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮುಸ್ಲಿಮರಿದ್ದಾರೆ.

2013ರಿಂದ 2015ರ ಮಧ್ಯೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾತಿನಿಧ್ಯ ಶೇ.35ರಿಂದ ಶೇ.20ಕ್ಕೆ ಇಳಿದಿದೆ.2018ರಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿ ಮಾತ್ರ ಛತ್ತೀಸ್ಗಡದಿಂದ ಗೆಲುವು ಸಾಧಿಸಿದ್ದರು.ಮಧ್ಯ ಪ್ರದೇಶ (2) , ರಾಜಸ್ಥಾನ (8) ಮತ್ತು ತೆಲಂಗಾಣದಿಂದ 8 ಸಂಸದರು ಆಯ್ಕೆಯಾಗಿದ್ದರು.

ಬಿಜೆಪಿ ಬಿಟ್ಟು ಇನ್ನಿತರ ಪಕ್ಷಗಳ ಲೆಕ್ಕ ಹೀಗಿದೆ
2009ರಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದ 29 ಮುಸ್ಲಿಂ ಅಭ್ಯರ್ಥಿಗಳಲ್ಲಿ 10 ಮಂದಿ ಗೆಲುವು ಸಾಧಿಸಿದ್ದರು.2014ರಲ್ಲಿ 34 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ಗೆದ್ದಿದ್ದರು.2019ರಲ್ಲಿ 32 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಈ ಬಾರಿ ಪ್ರಾದೇಶಿಕ ಪಕ್ಷಗಳೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಉದಾಸೀನ ತೋರಿದ್ದವು. ಉತ್ತರ ಪ್ರದೇಶದಲ್ಲಿ ಚುನಾವಣೆ ಸ್ಪರ್ಧಿಸಿದ ಮಹಾಮೈತ್ರಿ ಕೂಟದಲ್ಲಿ 72 ಅಭ್ಯರ್ಥಿಗಳಲ್ಲಿ 10 ಮಂದಿ ಮುಸ್ಲಿಮರಾಗಿದ್ದರು (ಬಿಎಸ್ಪಿ- 6,ಎಸ್ಪಿ -4). 2009 ಮತ್ತು 2014ರಲ್ಲಿ ಬಿಎಸ್ಪಿಯಲ್ಲಿಕ್ರಮವಾಗಿ 14, 19 ಮತ್ತು ಸಮಾಜವಾದಿ ಪಕ್ಷದಲ್ಲಿ 11 ಮತ್ತು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಹಾರದಲ್ಲಿ ಆರ್ಜೆಡಿ - 4, ಜೆಡಿಯುಮತ್ತು ಎಲ್ಜೆಪಿ ತಲಾ ಒಬ್ಬರನ್ನು ಕಣಕ್ಕಿಳಿಸಿದ್ದರು. ಆದಾಗ್ಯೂ, ಟಿಆರ್ಸ್, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಡಿ ಪಕ್ಷಗಳುತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಒಡಿಶಾದಲ್ಲಿ ಮಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

1980ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 49 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು. ಆಗಿನ ಲೋಕಸಭೆಯಲ್ಲಿ ಅವರಪ್ರಾತಿನಿಧ್ಯ ಶೇ.10 ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.