ಇಟಾನಗರ: ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯ ಮೆಚುಕಾದಲ್ಲಿ ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಪಡೆಗಳು ಜಂಟಿಯಾಗಿ ಸಮರಾಭ್ಯಾಸ ನಡೆಸಿವೆ ಎಂದು ರಕ್ಷಣಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

‘ಪೂರ್ವಿ ಪ್ರಹಾರ’ ಎಂಬ ಹೆಸರಿನಲ್ಲಿ ನಾಲ್ಕು ದಿನಗಳು ನಡೆದ ಸಮರಾಭ್ಯಾಸವು ಗುಪ್ತಚರ ಮಾಹಿತಿ ಸಂಗ್ರಹ, ಕಣ್ಗಾವಲು, ಬೇಹುಗಾರಿಕೆ ಮತ್ತು ತ್ವರಿತ ಸಜ್ಜುಗೊಳಿಸುವಿಕೆ, ನಿಯೋಜನೆ ಮತ್ತು ಕಾರ್ಯಕಾರಿ ತಂತ್ರವನ್ನು ಒಳಗೊಂಡಿತ್ತು’ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅತುಲ್ ಶ್ರೀಧರನ್ ಹೇಳಿದ್ದಾರೆ.

‘ಈ ಸಮರಾಭ್ಯಾಸ ಪಡೆಗಳ ಶಕ್ತಿಯ ಪೂರ್ಣಪ್ರಮಾಣದ ಪ್ರದರ್ಶನವಾಗಿದ್ದು, ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡಿತ್ತು. ಅಲ್ಲದೆ, ಪಡೆಗಳ ನಡುವೆ ಸಮನ್ವಯ ಸಾಧಿಸಲು ಅಗತ್ಯವಾದ ನಾಗರಿಕ-ಮಿಲಿಟರಿ ತಾಲೀಮನ್ನು ಪ್ರದರ್ಶಿಸಿದವು’ ಎಂದರು.

ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆರ್.ಸಿ. ತಿವಾರಿ ಮತ್ತು ಪೂರ್ವ ಏರ್ ಕಮಾಂಡ್ನ ಏರ್ ಮಾರ್ಷಲ್ ಐ.ಎಸ್. ವಾಲಿಯಾ ಅವರು ನವೆಂಬರ್ 14ರಿಂದ 17ರವರೆಗೆ ನಡೆದ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.