ಗುವಾಹಟಿ: ಈ ವರ್ಷದ ನವೆಂಬರ್ ತಿಂಗಳಿನ ಅಂತ್ಯದೊಳಗೆ ಬೊಜ್ಜು ಕರಗಿಸದಿದ್ದರೆ ಸ್ವಯಂ ನಿವೃತ್ತಿ ನೀಡುವುದಾಗಿ ಸಿಬ್ಬಂದಿಗಳಿಗೆ ಅಸ್ಸಾಂ ಪೊಲೀಸ್ ಇಲಾಖೆ ತಿಳಿಸಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ದೇಶನದ ಮೇರೆಗೆ ಹೀಗೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

‘ಪೊಲೀಸ್ ಸಿಬ್ಬಂದಿಗಳ ಬಾಡಿ ಮಾಸ್ ಇಂಡೆಕ್ಸ್ ಅನ್ನು ದಾಖಲಿಸಲು ಅಸ್ಸಾಂ ಪೊಲೀಸ್ ನಿರ್ಧರಿಸಿದೆ. ಇದು ಐಪಿಎಸ್, ಎಪಿಎಸ್ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ‘ ಎಂದು ಅವರು ಹೇಳಿದ್ದಾರೆ.

‘ಐಪಿಎಸ್ ಹಾಗೂ ಅಸ್ಸಾಂ ಪೊಲೀಸ್ ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಆಗಸ್ಟ್ 15 ರಿಂದ ಬಿಎಂಐ ಮೌಲ್ಯಮಾಪನ ಶುರುವಾಗಲಿದೆ‘ ಎಂದು ಹೇಳಿದ್ದಾರೆ.

ಆಗಸ್ಟ್ 16ರಂದು ಈ ಪರೀಕ್ಷೆಗೆ ಒಳಪಡುವ ಮೊದಲ ವ್ಯಕ್ತಿ ನಾನಾಗಿರಲಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.