ಚಂಡೀಗಡ: ಕಾಂಗ್ರೆಸ್ ನಾಯಕತ್ವವು ಬುದ್ಧಿ ಕಲಿಯುವುದಿಲ್ಲ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟೀಕಿಸಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾರಣ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿತ್ತು.

ಈ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅಮರಿಂದರ್ ಸಿಂಗ್, ‘ಕಾಂಗ್ರೆಸ್ ನಾಯಕತ್ವವು ಬುದ್ಧಿ ಕಲಿಯುವುದಿಲ್ಲ. ಯುಪಿಯಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿಗೆ ಯಾರು ಹೊಣೆ? ಮಣಿಪುರ, ಗೋವಾ, ಉತ್ತರಾಖಂಡದ ಕುರಿತು ಏನು ಹೇಳುತ್ತಾರೆ? ಇದಕ್ಕೆ ಉತ್ತರವನ್ನು ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಆದರೆ, ಯಾವಾಗಲೂ ಅವರು(ಕಾಂಗ್ರೆಸ್ ನಾಯಕತ್ವ) ಉತ್ತರವನ್ನು ಅರಿಯುವ ಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಾರೆ’ ಎಂದು ಟ್ವೀಟಿಸಿದ್ದಾರೆ.

ಇದನ್ನೂ ಓದಿ– Punjab Results: ಪಂಜಾಬ್ ಸೋಲಿಗೆ ಅಮರಿಂದರ್ರನ್ನು ಹೊಣೆ ಮಾಡಿದ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.