ನವದೆಹಲಿ: ‘ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ‘ಕೋವಿಶೀಲ್ಡ್’ನ ಎರಡು ಡೋಸ್ಗಳ ಅಂತರ 45 ವಾರದವರೆಗೂ ಇರಬಹುದಿದ್ದು, ಪ್ರತಿಕಾಯಗಳ ಸೃಷ್ಟಿಯು ಹೆಚ್ಚಿರಲಿದೆ’ ಎಂದು ಬ್ರಿಟನ್ನ ಅಧ್ಯಯನವೊಂದು ಹೇಳಿದೆ.

ಇನ್ನು ವಿಮರ್ಶೆಗೆ ಒಳಪಡದ ಈ ಅಧ್ಯಯನ ವರದಿಯ ಪ್ರಕಾರ, ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ನಿಂದ ಸೃಷ್ಟಿಯಾಗುವ ಪ್ರತಿಕಾಯಗಳು ಒಂದು ವರ್ಷದವರೆಗೂ ಸುಧಾರಿತ ಸ್ಥಿತಿಯಲ್ಲಿಯೇ ಇರುತ್ತವೆ.

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪ್ರಸ್ತುತ 12–16 ವಾರಗಳ ಅಂತರದಲ್ಲಿ ನೀಡಲಾಗುತ್ತಿದೆ.

ವರದಿಯ ಲೇಖಕರ ಪ್ರಕಾರ, ಕೋವಿಶೀಲ್ಡ್ನ ಎರಡು ಡೋಸ್ಗಳ ಅಂತರವನ್ನು 45 ವಾರ ಅಥವಾ 11 ತಿಂಗಳಿಗೆ ವಿಸ್ತರಿಸಿದ ಬಳಿಕ, ಹಿಂದಿನ 28 ದಿನದ ಅಂತರಕ್ಕೆ ಹೋಲಿಸಿದರೆ ನಿರೋಧಕ ಶಕ್ತಿ 18 ಪಟ್ಟು ಹೆಚ್ಚಾಗಿದೆ.

ವರದಿಯನ್ನು ಮುದ್ರಣ ಪೂರ್ವ ಸರ್ವರ್ ‘ದ ಲ್ಯಾನ್ಸೆಂಟ್’ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದ ಹಾಗೂ ಒಂದು ಅಥವಾ ಎರಡೂ ಡೋಸ್ ಪಡೆದಿದ್ದ 18 ರಿಂದ 55 ವರ್ಷದವರು ಭಾಗಿಯಾಗಿದ್ದರು.

ಲಸಿಕೆಯ ಒಂದು ಡೋಸ್ ಪಡೆದವರಲ್ಲಿನ ನಿರೋಧಕ ಶಕ್ತಿಯನ್ನು ಅಂದಾಜಿಸಿ ವರದಿಯನ್ನು ರೂಪಿಸಿದೆ.12 ವಾರಗಳ ಅಂತರದಲ್ಲಿ ಲಸಿಕೆ ಪಡೆದಲ್ಲಿ ದೇಹದಲ್ಲಿ ಪ್ರತಿಕಾಯಗಳ ಸೃಷ್ಟಿ ನಾಲ್ಕು ಪಟ್ಟು ಹೆಚ್ಚಾಗಲಿದೆ ಎಂಬುದು ಇದರ ಸಾರ.

‘ಲಸಿಕೆಯ ಪೂರೈಕೆಯು ಕಡಿಮೆ ಇರುವ ಹಾಗೂ ಎರಡನೇ ಡೋಸ್ ಲಸಿಕೆಯನ್ನು ನೀಡುವುದು ವಿಳಂಬವಾಗಿರುವ ದೇಶಗಳ ಮಟ್ಟಿಗೆ ಇದೊಂದು ಸಮಾಧಾನಕರ ಬೆಳವಣಿಗೆಯಾಗಿದೆ’ ಎಂದು ಆಕ್ಸ್ಫರ್ಡ್ ಯೂನಿವರ್ಸಿಟಿಯ ಮುಖ್ಯ ಸಂಶೋಧಕ ಪ್ರೊ. ಆ್ಯಂಡ್ರೂ ಜೆ. ಪೊಲಾರ್ಡ್ ಅವರು ಪ್ರತಿಕ್ರಿಯಿಸುತ್ತಾರೆ.

ಇದನ್ನೂ ಓದಿ... ‘ಮಾಡರ್ನಾ‘ ಕೋವಿಡ್ ಲಸಿಕೆ ಆಮದು ಮಾಡಿಕೊಳ್ಳಲಿದೆ ಸಿಪ್ಲಾ: ಡಿಸಿಜಿಐ ಅನುಮೋದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.