ರುದ್ರಪ್ರಯಾಗ: ಉತ್ತರಾಖಂಡದ ಕೇದಾರನಾಥ ದೇವಾಲಯದ ಸಮೀಪದಲ್ಲಿರುವ ಗಾಂಧಿ ಸರೋವರದ ಬಳಿ ಭಾನುವಾರ ಭಾರಿ ಪ್ರಮಾಣ ಹಿಮಪಾತ ಸಂಭವಿಸಿದೆ.

ಹಿಮಪಾತದ ವಿಡಿಯೊವನ್ನು ಪಿಟಿಐ ಹಂಚಿಕೊಂಡಿದೆ.

ಭಾನುವಾರ ಬೆಳಿಗ್ಗೆ 5 ಗಂಟೆ ಹೊತ್ತಿಗೆ ಗಾಂಧಿ ಸರೋವರದ ಬಳಿ ಹಿಮಪಾತ ಸಂಭವಿಸಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ಎಎನ್ಐಗೆ ತಿಳಿಸಿದ್ದಾರೆ.

‘ಕೇದಾರನಾಥ ದೇವಾಲಯಕ್ಕೆ ಜೂನ್ 6ರವರೆಗೆ 7 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈಗ ಆಗಿರುವ ಹಿಮಪಾತ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ, ಮೇ 10ರಂದು ಆರಂಭವಾದ ಪ್ರಸಿದ್ಧ ‘11ನೇ ಜ್ಯೋತಿರ್ಲಿಂಗ’ ಎನಿಸಿರುವ ಕೇದಾರನಾಥಕ್ಕೆ 28 ದಿನಗಳಲ್ಲಿ ಬರೋಬ್ಬರಿ 7,10,698 ಭಕ್ತರು ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.