ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲಕಿಗೆ ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆಕೆಯನ್ನು ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
.ಕೋಚಿಂಗ್ ಸೆಂಟರ್ಗಳು ಮೃತ್ಯುಕೂಪಗಳು: ಸುಪ್ರೀಂ ಕೋರ್ಟ್ .MCDಗೆ ಹಿರಿಯ ಸದಸ್ಯರನ್ನು ನೇಮಿಸುವ ಅಧಿಕಾರ LGಗೆ ಇದೆ: ಸುಪ್ರೀಂ ಕೋರ್ಟ್.
ಅಯೋಧ್ಯೆಯ ಮಹಿಳಾ ಆಸ್ಪತ್ರೆಯಲ್ಲಿ ಆಕೆಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯವಿಲ್ಲದ ಕಾರಣ ಬಾಲಕಿಯನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಸಂಜಯ್ ಜೈನ್ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ಜತೆಯಲ್ಲಿ ಲಖನೌ ಆಸ್ಪತ್ರೆಗೆ ತೆರಳುವುದಾಗಿ ಜೈನ್ ತಿಳಿಸಿದ್ದಾರೆ.

(ಆರೋಪಿ) ಮೊಯಿದ್ ಖಾನ್ ಸಮಾಜವಾದಿ ಪಕ್ಷದ ಸದಸ್ಯರಾಗಿದ್ದು, ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರೊಂದಿಗೆ ಗುರುತಿಸಿಕೊಂಡಿದ್ದಾನೆ. ಕೊಲೆಗಡುಕರಿಗೆ ಹಾಗೂ ಅತ್ಯಾಚಾರಿಗಳನ್ನು ಪೋಷಿಸುವುದು ಸಮಾಜವಾದಿ ಪಕ್ಷದ ಹಳೆ ಹವ್ಯಾಸವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದ್ದಾರೆ.
.ಗಡಿ ನಿಯಂತ್ರಣ ರೇಖೆ ಬಳಿ ಶಂಕಿತ ನುಸುಳುಕೋರರು: ಸೇನೆಯಿಂದ ಗುಂಡಿನ ದಾಳಿ.ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ಯುಪಿ DCM ಪಾಠಕ್.
ಮೊಯಿದ್ ಖಾನ್ ಮತ್ತು ಆತನ ಸಹಚರ ರಾಜು ಖಾನ್ ಎಂಬುವವರು ಎರಡು ತಿಂಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ವೈದ್ಯಕೀಯ ತಪಾಸಣೆ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.Wayanad Landslide | ಮಕ್ಕಳ ಅಸಹಾಯಕತೆಯ ಕಣ್ಣಿನಲ್ಲಿ ಭೂಕುಸಿತದ ಭೀಕರತೆಯ ನೋಟ...ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಆಗಸ್ಟ್ 9ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ.
ಪ್ರಕರಣ ಸಂಬಂಧ ಜುಲೈ 30ರಂದು ಅಯೋಧ್ಯೆಯ ಪುರಕಲಂದರ್ ಪ್ರದೇಶದಲ್ಲಿ ಮೊಯಿದ್ ಖಾನ್ ಮತ್ತು ರಾಜು ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.