ಅಯೋಧ್ಯೆ: ರಾಮ ಮಂದಿರ ಮತ್ತು ಮಸೀದಿಯ ಜಾಗದ ವಿವಾದದಿಂದಷ್ಟೇಸುದ್ದಿಯಾಗುವ ಅಯೋಧ್ಯೆಯಲ್ಲಿ ಧಾರ್ಮಿಕ ಸಾಮರಸ್ಯದ ಪ್ರಸಂಗಗಳೂ ನಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅಲ್ಲಿನ ಸೀತಾ ರಾಮ ದೇಗುಲವೊಂದರಲ್ಲಿ ಸೋಮವಾರ ರಂಜಾನ್ ಮಾಸಾಚರಣೆಯ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್ಗೆ ಆಗಮಿಸಿದ ಮುಸ್ಲಿಂಧರ್ಮೀಯರು ಭೋಜನ ಸ್ವೀಕರಿಸಿದರು.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಜತೆ ಮಾತನಾಡಿರುವ ದೇಗುಲದ ಅರ್ಚಕ, ಇಫ್ತಾರ್ ಕೂಟದ ಆಯೋಜಕ ಯುಗಲ್ ಕಿಶೋರ್, ‘ದೇಗುಲದ ಆವರಣದಲ್ಲಿ ಆಯೋಜಿಸುತ್ತಿರುವ ಮೂರನೇ ಇಫ್ತಾರ್ ಕೂಟವಿದು. ಭವಿಷ್ಯದಲ್ಲೂ ನಾವು ಹೀಗೆಯೇ ನಡೆದುಕೊಳ್ಳುತ್ತೇವೆ. ನವೋತ್ಸಾಹದಿಂದ ಎಲ್ಲ ಧರ್ಮದ ಹಬ್ಬಗಳನ್ನೂ ನಾವುಆಚರಿಸಬೇಕು,’ಎಂದು ಅವರು ಅಭಿಪ್ರಾಯಪಟ್ಟರು.

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಮುಜಾಮಿಲ್ ಫೈಜಲ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದರು. ನಾವು ನವರಾತ್ರಿಯನ್ನು ಹಿಂದೂ ಬಾಂಧವರೊಂದಿಗೆ ಪ್ರತಿ ವರ್ಷ ಆಚರಿಸುತ್ತೇವೆ ಎಂದು ಅವರು ಹೇಳಿದರು.

ಧರ್ಮದ ಅಂಕೆಗಳಿಲ್ಲದೆ ಎಲ್ಲರೂ ನಮ್ಮ ಜತೆಗೆ ಸೇರಬಹುದು ಎಂದೂ ಫೈಜಲ್ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.