ಹಮೀರಪುರ(ಹಿಮಾಚಲ ಪ್ರದೇಶ): ಪ್ರಸಾದದ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಬಾಬಾ ಬಾಲಕನಾಥ ದೇವಸ್ಥಾನ ಟ್ರಸ್ಟ್ನ ಪಾಕಶಾಲೆಗೆ ಆಡಳಿತ ಮಂಡಳಿ ಬೀಗ ಹಾಕಿದೆ.

ಗೋಧಿ, ಸಕ್ಕರೆ ಮತ್ತು ತುಪ್ಪವನ್ನು ಬಳಸಿ ತಯಾರಿಸುವ ‘ರೋಟ್ಸ್’ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಈ ಪ್ರಸಾದವನ್ನು ದೊಡ್ಡಮಟ್ಟದಲ್ಲಿ ತಯಾರಿಸಿ ಬಹಳ ದಿನಗಳವರೆಗೆ ಶೇಖರಿಸಿಡಲಾಗುತ್ತದೆ.

‘ದೇವಸ್ಥಾನ ಟ್ರಸ್ಟ್ನ ಪಾಕಶಾಲೆಗಳನ್ನು ಮುಚ್ಚಲಾಗಿದೆ. ಒಂದು ಪಾಕಶಾಲೆ ಅನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಮತ್ತೊಂದು ಪಾಕಶಾಲೆಯನ್ನು ಹೊರಗುತ್ತಿಗೆಗೆ ನೀಡುವ ಟೆಂಡರ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು’ ಎಂದು ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ, ಬಾರ್ಸರ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಂದ್ರ ಗೌತಮ್ ಅವರು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಪ್ರಸಾದದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಆಹಾರ ಸುರಕ್ಷತಾ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ವೇಳೆ ಪ್ರಸಾದ ಸೇವಿಸಲು ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಖಾಸಗಿ ಅಂಗಡಿಗಳಲ್ಲಿಯೂ ಮಾರಾಟವಾಗುವ ಪ್ರಸಾದ ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ.

ಪ್ರತಿ ವರ್ಷ 50ರಿಂದ 75 ಲಕ್ಷ ಜನರು ಬಾಬಾ ಬಾಲಕ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.