ಗೋರಖಪುರ: ‘ಉತ್ತರ ಪ್ರದೇಶದ ಬಾಬಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಲ್ಯಾಪ್‌ಟಾಪ್ ಬಳಸಲು ಬರುವುದಿಲ್ಲ. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

‘ದ್ವೇಷ ಹರಡುವುದು ಬಿಟ್ಟು ಬಿಜೆಪಿಗೆ ಬೇರೇನೂ ಗೊತ್ತಿಲ್ಲ. ಸೋಲು ಖಚಿತ ಎಂಬುದು ಅರಿವಾದ ಬಳಿಕ ಅವರು ಸುಳ್ಳು ಹರಡುತ್ತಿದ್ದಾರೆ. ಈಗ ಅವರ ಭಾಷೆಯೇ ಬದಲಾಗಿದೆ’ ಎಂದು ಅಖಿಲೇಶ್ ಆರೋಪಿಸಿದ್ದಾರೆ.

‘ಬಾಬಾ ಅವರು ಆಂಬುಲೆನ್ಸ್ ಸೇವೆಯನ್ನು ಹಾಳು ಮಾಡಿದ್ದಾರೆ. ಆ ಸೇವೆಯ ಸಹಾಯವಾಣಿ ಸಂಖ್ಯೆ ಕೆಲಸವೇ ಮಾಡುತ್ತಿಲ್ಲ. ಲ್ಯಾಪ್‌ಟಾಪ್ ವಿತರಿಸುವುದಾಗಿ ಬಿಜೆಪಿ ಭರವಸೆ ಕೊಟ್ಟಿತ್ತು. ಆದರೆ, ಬಾಬಾಗೆ ಲ್ಯಾಪ್‌ಟಾಪ್ ಬಳಸುವುದು ಗೊತ್ತಿಲ್ಲ. ಹಾಗಾಗಿ ಅವರು ಲ್ಯಾಪ್‌ಟಾಪ್ ವಿತರಣೆ ಕೈಬಿಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.