ರಾಷ್ಟ್ರ ಮಟ್ಟದಲ್ಲಿ ಹಲವು ದುರಂತ, ಅಪಘಾತ, ಅನಾಹುತ, ದಾಳಿಗಳಿಗೆಸಾಕ್ಷಿಯಾದ ವರ್ಷ2019. ಈ ವರ್ಷ ಸಂಭವಿಸಿದ ಪ್ರಮುಖ ದುರಂತಗಳ ಕಹಿನೆಪುಗಳ ದಾಖಲಾತಿಇಲ್ಲಿದೆ.

ಫೆಬ್ರುವರಿ 14: ಪುಲ್ವಾಮಾದಲ್ಲಿ ಉಗ್ರರ ದಾಳಿ

ಶ್ರೀನಗರ– ಜಮ್ಮು ಹೆದ್ದಾರಿಯ ಅವಂತಿಪೋರಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ಗೆ ಜೈಷ್–ಎ–ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದ.40 ಯೋಧರು ಹುತಾತ್ಮರಾಗಿದ್ದರು

ಫೆಬ್ರುವರಿ 26:ಪುಲ್ವಾಮಾ ದಾಳಿಗೆ ಪ್ರತೀಕಾರ

ಬೆಳಿಗ್ಗೆ 3.45ಕ್ಕೆ ಭಾರತದ ವಾಯುಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ನಲ್ಲಿದ್ದ ಜೆಇಎಂನ ಅತ್ಯಂತ ದೊಡ್ಡ ತರಬೇತಿ ಶಿಬಿರವನ್ನು ವಾಯುದಾಳಿಯ ಮೂಲಕ ನಾಶ ಮಾಡಿತ್ತು.20 ನಿಮಿಷದ ಕಾರ್ಯಾಚರಣೆಯಲ್ಲಿ350ಉಗ್ರರು ನಿರ್ನಾಮವಾಗಿದ್ದರು

ಫೆಬ್ರುವರಿ 27: ಪಾಕ್ ಸೇನೆ ವಶಕ್ಕೆ ಅಭಿನಂದನ್

ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿದ್ದ ಮಿಗ್ ವಿಮಾನ ಪತನಗೊಂಡಿತ್ತು. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಪ್ಯಾರಾಚೂಟ್ ಸಹಾಯದಿಂದ ಇಳಿದಿದ್ದ ಅಭಿನಂದನ್ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿತ್ತು

ಮಾರ್ಚ್ 1: ಅಭಿನಂದನ್ ಬಿಡುಗಡೆ

ಭಾರತ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು ಶುಕ್ರವಾರ (ಮಾರ್ಚ್ 1) ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು

ಮಾರ್ಚ್ 17: ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್ ನಿಧನ

ಜೂನ್ 17: ಬಿಸಿಗಾಳಿಗೆ ಸಾವು

ಬಿಹಾರದಲ್ಲಿ ಬಿಸಿಗಾಳಿಗೆ 52 ಜನ ಬಲಿ ಉಷ್ಣಾಂಶ 45.8ಡಿಗ್ರಿ ಸೆಲ್ಸಿಯಸ್ ದಾಟಿತ್ತು

ಜೂನ್ 23: ಶಾಮಿಯಾನ ಬಿದ್ದು ಸಾವು

ರಾಜಸ್ಥಾನದ ಬಾರ್ಮೇರ್ ಜಿಲ್ಲೆ ಜಸೋಲ್ನಲ್ಲಿ ‘ರಾಮಕಥಾ’ ಕಾರ್ಯಕ್ರಮದ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಶಾಮಿಯಾನ ಬಿದ್ದು 14 ಮಂದಿ ಸಾವು

ಜುಲೈ 2: ಮಹಾಮಳೆಗೆ ನಲುಗಿದ ಮುಂಬೈ

35 ಮಂದಿ ಬಲಿಯಾಗಿದ್ದರು

ಜುಲೈ 3: ಪ್ರವಾಹ

ಮಹಾರಾಷ್ಟ್ರದ 7 ಗ್ರಾಮಗಳಲ್ಲಿ ಪ್ರವಾಹ, ರತ್ನಗಿರಿ ಜಿಲ್ಲೆಯ ತಿವರೆ ಅಣೆಕಟ್ಟು ಒಡೆದು 11ಮಂದಿ ಸಾವು

ಜುಲೈ 20: ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ನಿಧನ.

ಆಗಸ್ಟ್ 6: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನ

ಆಗಸ್ಟ್ 24: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ನಾಯಕ ಅರುಣ್ ಜೇಟ್ಲಿ ನಿಧನ

ಅಕ್ಟೋಬರ್ 1: ಭಾರಿ ಮಳೆ

ಉತ್ತರ ಪ್ರದೇಶದಲ್ಲಿ ಜೈಲು ಜಲಾವೃತ; ಕೈದಿಗಳ ಸ್ಥಳಾಂತರ. ಮಳೆಗೆ 100 ಬಲಿ

ಡಿಸೆಂಬರ್ 8: ಬೆಂಕಿ ಅವಘಡ

ನವದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡದಿಂದ 43 ಮಂದಿ ಕಾರ್ಮಿಕರು ಸಾವನ್ನಪ್ಪಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.