ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ನ ವಾಹುಜ್‌ನಲ್ಲಿರುವ ಘಟಕದಲ್ಲಿ 140 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಬಜಾಜ್ ಆಟೊ ಕಂಪನಿ ಶುಕ್ರವಾರ ತಿಳಿಸಿದೆ. ಈ ಘಟಕದಲ್ಲಿ 8,100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸೋಂಕಿನಿಂದಾಗಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ.

ವಾಹುಜ್ ಘಟಕದಲ್ಲಿ 8,100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿದ್ದಾರೆ ಎಂದು ಕಂಪನಿಯ ಸಿಎಚ್‌ಆರ್‌ಒ ರವಿ ಕಿರಣ್ ರಾಮಸ್ವಾಮಿ ತಿಳಿಸಿದ್ದಾರೆ.

‘ಸದ್ಯ ಈ ಘಟಕದಲ್ಲಿ 140 ಪ್ರಕರಣ ಪತ್ತೆಯಾಗಿದ್ದು, ಇದು ನಮ್ಮಲ್ಲಿರುವ ಸಿಬ್ಬಂದಿಯ ಶೇ 2ಕ್ಕಿಂತಲೂ ಕಡಿಮೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹಿನ್ನೆಲೆಯುಳ್ಳ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿ ಮನೆ–ಮನೆ ಸಮೀಕ್ಷೆ; ಅಪಾಯದ ವರ್ಗದಲ್ಲಿ 63.85 ಲಕ್ಷ ಜನತೆ

ಘಟಕವನ್ನು ಎರಡು ದಿನಗಳ ಕಾಲ ಮುಚ್ಚಲಾಗುವುದು ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಮಸ್ವಾಮಿ, ಲಾಕ್‌ಡೌನ್ ತೆರವಾದ ಬಳಿಕ ನಾವು ಪ್ರತಿ ಶನಿವಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ. ಭಾನುವಾರ ರಜೆ ಇದೆ. ಉಳಿದ ದಿನಗಳಲ್ಲಿ ಎಂದಿನಂತೆ ಘಟಕ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.