ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಸಾಚಾರ ತನಿಖೆಗೆ ವಿಶ್ವಸಂಸ್ಥೆ ಸಹಕಾರ ಕೋರಿದ ಬಾಂಗ್ಲಾ ಪ್ರಧಾನಿ ಹಸೀನಾ

Published : 31 ಜುಲೈ 2024, 14:42 IST
Last Updated : 31 ಜುಲೈ 2024, 14:42 IST
ಫಾಲೋ ಮಾಡಿ
Comments

ಢಾಕಾ: ಮಿಸಲಾತಿ ವಿರೋಧಿಸಿ ಈಚೆಗೆ ಬಾಂಗ್ಲಾದೇಶದಾದ್ಯಂತ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸಲು ವಿಶ್ವಸಂಸ್ಥೆ ಮತ್ತು ಇತರ ಅಂತರರರಾಷ್ಟ್ರೀಯ ಸಂಸ್ಥೆಗಳಿಂದ ಪ್ರಧಾನಿ ಶೇಕ್‌ ಹಸೀನಾ ಅವರು ಬುಧವಾರ ಸಹಕಾರ ಕೋರಿದರು. 

1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾ ಸಿಬ್ಬಂದಿಯ ಮಕ್ಕಳು ಮತ್ತು ಸಂಬಂಧಿಕರಿಗೆ ಸರ್ಕಾರಿ ನೇಮಕಾತಿಗಳಲ್ಲಿ ನೀಡಲಾಗಿದ್ದ ಶೇ30ರಷ್ಟು ಕೋಟಾವನ್ನು ಕೊನೆಗೊಳಿಸಬೇಕೆಂದು ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. 

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಸೀನಾ, ‘ಹಿಂಸಾಚಾರದಲ್ಲಿ ಭಾಗಿಯಾದ ನಿಜವಾದ ಅಪಾರಾಧಿಗಳನ್ನು ಶಿಕ್ಷಿಸಲು ಮತ್ತು ಅದರ ಕುರಿತು ತನಿಖೆ ನಡೆಸಲು ನಾವು ವಿಶ್ವಸಂಸ್ಥೆ ಹಾಗೂ ಇತರ ಸಂಸ್ಥೆಗಳ ಸಹಕಾರವನ್ನು ಬಯಸುತ್ತೇವೆ. ದೇಶದ ಆಸ್ತಿ‍ಗಳಿಗೆ ಹಾನಿ ಮಾಡಿ, ನೂರಾರು ಜನರನ್ನು ಕೊಂದು ದೇಶದ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ. ಈ ರಕ್ತಪಾತದಿಂದ ಯಾರು ಏನು ಗಳಿಸಿದರು ಎಂಬುದೇ ನನ್ನ ಪ್ರಶ್ನೆ’ ಎಂದರು. 

ಪಾಕಿಸ್ತಾನದ ಕೆಲ ಗುಂ‍ಪುಗಳ ಪಿತೂರಿಯಿಂದಾಗಿ ಬಾಂಗ್ಲಾದೇಶಕ್ಕೆ ಮತ್ತೆ ಹಿನ್ನಡೆ ಆಗುತ್ತಿದೆ. ಇದು ಅತ್ಯಂತ ನೋವಿನ ಮತ್ತು ವಿಷಾದನೀಯ ಸಂಗತಿಯಾಗಿದೆ ಎಂದು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT