ನವದೆಹಲಿ (ಪಿಟಿಐ): ‘ಬಿಯರ್ ಮೇಲಿನ ಸುಂಕ ಹೆಚ್ಚಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು’ ಎಂದು ಬ್ರೀವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಿಎಐ, ‘ಸುಂಕ ಹೆಚ್ಚಳದಿಂದ ಬಿಯರ್ ಮಾರಾಟ ಕುಸಿಯುವ ಅಪಾಯವಿದೆ. ಇದರಿಂದ ಸರ್ಕಾರದ ಆದಾಯವೂ ಕಡಿಮೆಯಾಗುತ್ತದೆ. ಹೀಗಾಗಿ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಕೋರಿದೆ.

‘ಬಿಯರ್ನಲ್ಲಿ ಇರುವ ವಿವಿಧ ಪದಾರ್ಥಗಳ ಪ್ರಮಾಣ ಎಷ್ಟು ಎಂಬುದನ್ನು ಲೇಬಲ್ ಮೇಲೆ ನಮೂದಿಸಬೇಕು ಎಂಬ ನಿಯಮದಿಂದ, ಉದ್ಯಮಕ್ಕೆ ಹೊಡೆತ ಬೀಳಲಿದೆ. ಬಿಯರ್ ತಯಾರಿಕೆಯ ವಿಧಾನಗಳು ಬಹಿರಂಗವಾಗುವುದರಿಂದ, ಸ್ಪರ್ಧೆ ಕಡಿಮೆಯಾಗಲಿದೆ. ಹೀಗಾಗಿ ಆ ನಿಯಮವನ್ನೂ ಹಿಂಪಡೆಯಬೇಕು’ ಎಂದು ಬಿಐಎ ಪ್ರಧಾನ ನಿರ್ದೇಶಕ ವಿನೋದ್ ಗಿರಿ ಅವರು ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.