ಚಂಡೀಗಢ: ‘ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆ (UPS)ಯು ನೌಕರ ವಿರೋಧಿಯಾಗಿದ್ದು, ಅ. 1ರಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಇದನ್ನು ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆ (OPS) ಜಾರಿಗೆ ತರಲಾಗುವುದು’ ಎಂದು ಸಂಸದ ದೀಪೆಂದರ್ ಹೂಡಾ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ನ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್ ಶೆರಾವತ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಹೊಸ ಪಿಂಚಣಿ ವ್ಯವಸ್ಥೆ (NPS)ಗೆ ಹೋಲಿಸಿದಲ್ಲಿ UPS ಜಾರಿಯು ಸರ್ಕಾರ ನಡೆಸುತ್ತಿರುವ ದೊಡ್ಡ ವಂಚನೆಯಾಗಿದೆ’ ಎಂದು ಆರೋಪಿಸಿದ್ದಾರೆ.
.ಸಂಪಾದಕೀಯ | ಏಕೀಕೃತ ಪಿಂಚಣಿ ಯೋಜನೆ: ಸಮತೋಲನ ಸಾಧಿಸುವ ಯತ್ನ.ಆಳ– ಅಗಲ | ಪಿಂಚಣಿ ಯೋಜನೆ: ಬದಲಾಗಿದ್ದೇಕೆ?.
ಈ ಯೋಜನೆಗೆ ಆ. 24ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಲ್ಲಿ 2004ರ ಜ. 1ರಿಂದ ಸರ್ಕಾರಿ ನೌಕರಿಗೆ ಸೇರಿದವರಿಗೆ ಪಿಂಚಣಿಯಾಗಿ ಮೂಲ ವೇತನದ ಶೇ 50ರಷ್ಟು ನೀಡಲು ಒಪ್ಪಿಗೆ ನೀಡಲಾಗಿದೆ. ಯುಪಿಎಸ್ ಆಯ್ಕೆ ಮಾಡಿಕೊಂಡವರಿಗೆ ಕೆಲಸಕ್ಕೆ ಸೇರಿ 25 ವರ್ಷಗಳ ನಂತರದಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

‘ಯುಪಿಎಸ್ ಹಾಗೂ ಎನ್ಪಿಎಸ್ ಯೋಜನೆಗಳು ನೌಕರ ವಿರೋಧಿ ಯೋಜನೆಗಳಾಗಿವೆ. ಅದರೆ ಇವುಗಳಲ್ಲಿ ಎನ್ಪಿಎಸ್ಗೆ ಹೋಲಿಸಿದಲ್ಲಿ ಯುಪಿಎಸ್ ಬಹು ದೊಡ್ಡ ವಂಚನೆಯಾಗಿದೆ’ ಎಂದಿದ್ದಾರೆ.

‘ಪೂರ್ಣ ಪಿಂಚಣಿ ಪಡೆಯಲು 25 ವರ್ಷಗಳ ವೃತ್ತಿ ಜೀವನವನ್ನು ಪರಿಗಣಿಸಲಾಗಿದೆ. ಇದರ ಬಹುದೊಡ್ಡ ನಷ್ಟ ಅರೆ ಸೇನಾ ಪಡೆಯ ಯೋಧರಿಗೆ ಆಗಲಿದೆ. ಇವರು 25 ವರ್ಷಗಳಿಗೂ ಮುನ್ನವೇ (ವಿಆರ್ಎಸ್) ನಿವೃತ್ತರಾದರೆ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕಾಗುತ್ತದೆ. ಇವರಿಗೆ ಕೇವಲ ₹10ಸಾವಿರ ಪಿಂಚಣಿ ಸಿಗಲಿದೆ’ ಎಂದು ಹೂಡಾ ಹೇಳಿದ್ದಾರೆ.
.ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ.ಏಕೀಕೃತ ಪಿಂಚಣಿ ವ್ಯವಸ್ಥೆ | ಯೂಟರ್ನ್ ಸರ್ಕಾರ: ಕಾಂಗ್ರೆಸ್ ವಾಗ್ದಾಳಿ.
‘ಕೇಂದ್ರ ಸರ್ಕಾರವು ಎನ್ಪಿಎಸ್ ಜಾರಿಗೆ ತಂದಾಗ ಒಪಿಎಸ್ಗಿಂತ ಎನ್ಪಿಎಸ್ ಉತ್ತಮ ಎಂದು ಪ್ರಚಾರ ಮಾಡಿತ್ತು. ಈಗ ಎನ್ಪಿಎಸ್ಗಿಂತ ಯುಪಿಎಸ್ ಉತ್ತಮ ಎಂದು ಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ಯುಪಿಎಸ್ ಆಯ್ಕೆ ಮಾಡಿಕೊಂಡರೆ, ನೌಕರರ ಕೊಡುಗೆಯ ಶೇ 10ರಷ್ಟು ಪಿಂಚಣಿಯೂ ಸಿಗದು. ಮೂಲವೇತನದ ಅರ್ಧದಷ್ಟು ಪಿಂಚಣಿ ಸಿಗಲಿದೆ. ಇದರಿಂದ ತುಟ್ಟಿ ಭತ್ಯೆ ತೆಗೆಯಲಾಗುತ್ತದೆ. ಆದರೆ ಐದು ವರ್ಷಗಳಲ್ಲಿ ತುಟ್ಟಿ ಭತ್ಯೆಯ ಪ್ರಮಾಣವು ಮೂಲ ವೇತನಕ್ಕೆ ಸರಿಸಮನಾಗುತ್ತದೆ. ಹೀಗಾಗಿ ಯಪಿಎಸ್ ಅಡಿಯಲ್ಲಿ ಪಿಂಚಣಿಯನ್ನು ಅರ್ಧಕ್ಕೆ ಇಳಿಸಲಾಗಿದೆ’ ಎಂದು ಹೂಡಾ ಹೇಳಿದ್ದಾರೆ.

ಒಪಿಎಸ್ನಲ್ಲಿ ನೌಕರರು ತನ್ನ ಕೊನೆಯ ತಿಂಗಳ ವೇತನದ ಶೇ 50ರಷ್ಟನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ. ಇದರ ಜಾರಿಗೆ ದೇಶವ್ಯಾಪಿ ಇರುವ ಸರ್ಕಾರಿ ನೌಕರರು ಬೇಡಿಕೆ ಸಲ್ಲಿಸಿದ್ದಾರೆ.

ಯುಪಿಎಸ್ನಲ್ಲಿ ನೌಕರರು ತಮ್ಮ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಸೇರಿ ಶೇ 10ರಷ್ಟನ್ನು ಪಿಂಚಣಿಗೆ ನೀಡಬೇಕು. ನೌಕರಿ ನೀಡುವ ಸಂಸ್ಥೆಯ ಹೂಡಿಕೆ ಶೇ 18.5ರಷ್ಟಾಗಿರಲಿದೆ.
.ಎನ್ಪಿಎಸ್ ಬದಲು ಯುಪಿಎಸ್ ಜಾರಿ: ಮೂಲ ವೇತನದ ಶೇ 50ರಷ್ಟು ಪಿಂಚಣಿ.ವರದಿ ನಂತರ ಹಳೇ ಪಿಂಚಣಿ ಮರು ಜಾರಿ: ಸಿದ್ದರಾಮಯ್ಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.