ನವದೆಹಲಿ: ‘2014ಕ್ಕೂ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಉದಾಸೀನದ ವಾತಾವರಣವಿತ್ತು. ಅದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿಯಲ್ಲಿ ದೇಶದ ಅತಿದೊಡ್ಡ ಡ್ರೋನ್ ಉತ್ಸವ ‘ಭಾರತ್ ಡ್ರೋನ್ ಮಹೋತ್ಸವ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅದ್ಭುತ ಉತ್ಸಾಹ ಕಂಡುಬರುತ್ತಿದೆ. ಇದು ಉದ್ಯೋಗ ಸೃಷ್ಟಿಯ ಉದಯೋನ್ಮುಖ ಸಾಧ್ಯತೆಗಳನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಯಿ ನಡಿಗೆಯ ಕಥೆ: ಐಎಎಸ್ ಅಧಿಕಾರಿಯ ಸಾಕುಪ್ರಾಣಿ ವಾಕಿಂಗ್ಗೆ ಸ್ಟೇಡಿಯಂ ಬಂದ್!

ನಾವು ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಜಾರಿಗೆ ತರಲು ಆರಂಭಿಸಿದ್ದೇವೆ. ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂಬ ಹಾದಿಯಲ್ಲಿ ನಡೆಯುತ್ತಿದ್ದೇವೆ. ಸುಲಭ ಜೀವನ ಮತ್ತು ವ್ಯವಹಾರಕ್ಕೆ ಆದ್ಯತೆ ನೀಡಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಂತ್ರಜ್ಞಾನವನ್ನು ಒಂದು ಸಮಸ್ಯೆಯನ್ನಾಗಿ ಕಾಣಲಾಗಿತ್ತಲ್ಲದೆ, ಅದನ್ನು ಬಡವರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆದಿತ್ತು. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಸಮಸ್ಯೆಗೆ ಒಳಗಾದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತಂತ್ರಜ್ಞಾನವು ಬಹಳಷ್ಟು ನೆರವಾಗಿದೆ ಎಂದು ಮೋದಿ ಹೇಳಿದರು.

ಶಿವಮೊಗ್ಗ: ಸರ್ಕಾರಿ ಶಾಲೆ ದಾಖಲಾತಿಗೆ ಮುಗಿಬಿದ್ದ ಜನ, 1200 ದಾಟಿದ ಮಕ್ಕಳ ಸಂಖ್ಯೆ

‘ಭಾರತ್ ಡ್ರೋನ್ ಮಹೋತ್ಸವ್’ ಕಾರ್ಯಕ್ರಮವು ಇಂದು ಮತ್ತು ನಾಳೆ (ಶನಿವಾರ) ದೆಹಲಿಯಲ್ಲಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.