ಕೇಂದ್ರಪಾಡಾ: ಒಡಿಶಾ ರಾಜ್ಯದಲ್ಲಿ ಮೂರು ತಿಂಗಳ ಕಾಲ ಪ್ರವಾಸಿಗರಿಗೆ ಮುಚ್ಚಿದ್ದ ಬೀತರ್ಕನಿಕಾ ರಾಷ್ಟ್ರೀಯ ಉದ್ಯಾನವನ್ನು ಮಂಗಳವಾರ ತೆರೆಯಲಾಗಿದೆ.

ಉದ್ಯಾನಕ್ಕೆ ಭೇಟಿ ನೀಡುವವರು www.ecotourodisha.comಗೆ ಲಾಗ್ಆನ್ ಆಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅರಣ್ಯ ವಿಭಾಗದ ಅಧಿಕಾರಿ ಸುದರ್ಶನ್ ಗೋಪಿನಾಥ್ ಯಾದವ್ ಅವರು ಮಾಹಿತಿ ನೀಡಿದರು.

ದೇಶ ಮತ್ತು ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಡಂಗಮಾಲ್, ಅಗರನಾಸಿ, ಹಬಲೀಕಾತಿ, ಗುಪ್ತಿ ಮತ್ತು ಏಕಕುಲಾಗಳಲ್ಲಿ ವಿಶ್ರಾಂತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಮತ್ತು ಬಳಸಿ ಬಿಸಾಡುವಂಥ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಬರದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಮೇ ತಿಂಗಳಿಂದ ಜುಲೈವರೆಗೂ ನದಿ ಮುಖಜ ಭೂಮಿಯಲ್ಲಿ ವಾಸಿಸುವ ಮೊಸಳೆಗಳ ಗಣತಿ ನಡೆದ ಕಾರಣ ಉದ್ಯಾನವನ್ನು ಮುಚ್ಚಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.