ನವದೆಹಲಿ: ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ಹರಭಜನ್ ಸಿಂಗ್ ಅವರ ನಡುವೆ ಉತ್ತಮ ಬಾಂಧವ್ಯ ಇರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಕ್ರಿಕೆಟ್ ನಂತರದ ಬದುಕಿನಲ್ಲಿ ಈ ಇಬ್ಬರು ಆಟಗಾರರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದಾರೆ.

ಪೂರ್ವ ದೆಹಲಿಯ ಬಿಜೆಪಿ ಸಂಸದರಾಗಿರುವ ಗಂಭೀರ್ ಅವರು ಎಎಪಿಯ ರಾಜ್ಯಸಭಾ ಸದಸ್ಯರಾಗಿರುವ ಹರಭಜನ್ ಸಿಂಗ್ ಜೊತೆಗಿನ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನಿಮ್ಮೊಂದಿಗೆ ನನ್ನದು ಹಳೆಯ ಗೆಳೆತನ(ಆಪ್‌ಸೆ ತೊ ಪುರಾಣಿ ದೋಸ್ತಿ ಹೈ)’ ಎಂಬ ಶೀರ್ಷಿಕೆಯನ್ನೂ ಗಂಭೀರ್ ಬರೆದುಕೊಂಡಿದ್ದಾರೆ.

ಗಂಭೀರ್‌ಗೆ ಪ್ರತಿಕ್ರಿಯಿಸಿರುವ ಹರಭಜನ್ ಸಿಂಗ್, ‘ಲೆಜೆಂಡ್ ಹಾಗೂ ನನ್ನ ಸಹೋದರನೇ, ನಿನ್ನನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದ್ದಾರೆ.

ಈ ಇಬ್ಬರು ಕ್ರಿಕೆಟಿಗರ ನಡುವಿನ ಸ್ನೇಹಪೂರ್ಣ ಸಂಭಾಷಣೆಯು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.