ನವದೆಹಲಿ: ಭಾರತದ ರಾಜತಾಂತ್ರಿಕತೆ ಯಲ್ಲಿ ಹಿಂದುತ್ವದ ತಾತ್ವಿಕತೆಯ ತಿರುಳನ್ನು ಸೇರಿಸುವ ಆಶಯವನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಪಡಿಸಿದೆ.

ಮಹಾತ್ಮ ಗಾಂಧಿ, ಬುದ್ಧನಂತಹ ಸಾಂಪ್ರದಾಯಿಕ ಮಾದರಿಗಳನ್ನು ಬಿಟ್ಟು ರಾಮನನ್ನು ಭಾರತೀಯ ರಾಜತಾಂತ್ರಿಕತೆಯ ಕೇಂದ್ರ ಪ್ರತಿಮೆಯಾಗಿ ಮಾಡುವ ಮೂಲಕ ಹೊಸ ರಾಜತಾಂತ್ರಿಕ ಪರಿಭಾಷೆ ರೂಪಿಸಲು ಬಿಜೆಪಿಯು ಮುಂದಾಗಿದೆ.

ರಾಮಾಯಣದಲ್ಲಿ ಅಡಕವಾಗಿರುವ ಬೋಧನೆಗಳನ್ನು ದಾಖಲೀಕರಿಸುವುದಕ್ಕೆ ಮತ್ತು ಪ್ರಚಾರ ಮಾಡುವುದಕ್ಕೆ ಬದ್ಧವಾದ ಸಮಗ್ರ ಜಾಗತಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡುವುದು ಬಿಜೆಪಿಯ ಚಿಂತನೆಯಾಗಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ರಾಮಾಯಣ ಉತ್ಸವ ಅಥವಾ ಹಬ್ಬಗಳನ್ನು ಆಯೋಜಿಸುವ ಮೂಲಕ ಈ ಯೋಜನೆಯನ್ನು ದೇಶಗಳ ಗಡಿಗಳನ್ನು ದಾಟಿಸುವ ಆಶಯವನ್ನು ಬಿಜೆಪಿ ವ್ಯಕ್ತಪಡಿಸಿದೆ.

‘ಭಾರತೀಯ ನಾಗರಿಕತೆಯ ಪ್ರಮುಖ ತಾಣಗಳನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ನಾವು ಜಗತ್ತಿನ ಹಲವು ರಾಷ್ಟ್ರಗಳೊಂದಿಗೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ರಾಮನ ಮೂರ್ತ ಮತ್ತು ಅಮೂರ್ತ ಪರಂಪರೆಯನ್ನು ಪ್ರಚುರಪಡಿಸಲು ಎಲ್ಲ ರಾಷ್ಟ್ರಗಳಲ್ಲಿ ಜಾಗತಿಕ ಪ್ರಚಾರ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದೇವೆ’ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳನ್ನು ರಕ್ಷಿಸಲು ಮತ್ತು ಪ್ರಚಾರ ಮಾಡಲು ತ್ರೈವಾರ್ಷಿಕ ಅಂತರರಾಷ್ಟ್ರೀಯ ಸಮಾವೇಶಗಳನ್ನು ಏರ್ಪಡಿಸುವುದರ ಜತೆಗೆ ಪ್ರಾಚೀನ ಸಾಹಿತ್ಯ ಕೃತಿಗಳನ್ನು ವಿದೇಶಿ ಭಾಷೆಗಳಿಗೆ ತರ್ಜುಮೆ ಮಾಡಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ.

‘ಯುಗೇ ಯುಗೀನ್ ಭಾರತ ರಾಷ್ಟ್ರೀಯ ಮ್ಯೂಸಿಯಂ’ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲಾಗುವುದು ಮತ್ತು ಅದನ್ನು ಜಗತ್ತಿನ ಅತ್ಯಂತ ಜನಪ್ರಿಯ ಮ್ಯೂಸಿಯಂ ಆಗಿ ರೂಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಯೋಗ, ಆಯುರ್ವೇದ ವಿದೇಶಕ್ಕೆ

‘ಪ್ರಮುಖ ರಾಷ್ಟ್ರಗಳಲ್ಲಿ ಯೋಗ ಮತ್ತು ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಿ, ವಿವಿಧ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಯೋಗ ಮತ್ತು ಆಯುರ್ವೇದಕ್ಕಾಗಿ ಜಾಗತಿಕವಾಗಿ ಮಾನ್ಯತೆ ಪಡೆದ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು. ಜಗತ್ತಿನ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಭಾರತದ ಶಾಸ್ತ್ರೀಯ ಭಾಷೆಗಳ ಕಲಿಕೆಯನ್ನು ಉತ್ತೇಜಿಸಲಾಗುವುದು. ಭಾರತದಿಂದ ಅಕ್ರಮವಾಗಿ ಹೊತ್ತೊಯ್ಯಲಾಗಿರುವ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ವಾಪಸ್ ತರಲಾಗುವುದು’ ಎಂದು ಕೂಡ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.