ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಒಟ್ಟು ಆರು ಲೋಕಸಭಾ ಕ್ಷೇತ್ರಗಳಲ್ಲಿಬಿಜೆಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ, ಪಿಡಿಪಿಗೆ ಈ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ 70 ಸಾವಿರ ಮತಗಳ ಅಂತರದಿಂದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಫಾರೂಕ್ ಅಬ್ದುಲ್ಲಾ ಅವರ ನಾಲ್ಕನೇ ಗೆಲುವಾಗಿದೆ. ಅಬ್ದುಲ್ಲಾ ಪರ 1.06 ಲಕ್ಷ ಮತಗಳು ಮತ್ತು ಪ್ರತಿಸ್ಪರ್ಧಿ ಪಿಡಿಪಿ ಅಭ್ಯರ್ಥಿ ಅಗಾ ಸಯ್ಯದ್ ಮೊಹ್ಸಿನ್ ಪರ 36,700 ಮತಗಳು ಚಲಾಯಿಸಲಾಗಿದೆ. 42 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಫಾರುಕ್ ಒಂದು ಬಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

1980ರಲ್ಲಿ ಫಾರುಕ್ ಅಬ್ದುಲ್ಲಾ ಲೋಕಸಭೆಗೆ ಆಯ್ಕೆಯಾಗಿದ್ದರು. ಅನಂತನಾಗ ಲೋಕಸಭಾ ಕ್ಷೇತ್ರದಲ್ಲಿಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪರಾಭವಗೊಂಡಿದ್ದಾರೆ. 2014ರಲ್ಲಿ ಜಯಗಳಿಸಿದ್ದ ಮೆಹಬೂಬಾ, ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಹಸ್ನೈನ್ ಮಸೂದಿ ಇಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ. ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಅವರು ಉದಮಪುರ ಕ್ಷೇತ್ರದಲ್ಲಿ3.48 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಪಿಡಿಪಿ ತಲಾ ಮೂರು ಸ್ಥಾನಗಳಲ್ಲಿ ಜಯಗಳಿಸಿದ್ದವು. ಫಾರುಕ್ ಅಬ್ದುಲ್ಲಾ ಅವರು 2017ರಲ್ಲಿ ನಡೆದ ಲೋಕಸಭೆಯ ಉಪಚುನಾವಣೆಯಲ್ಲಿ ಜಯಗಳಿಸಿದ್ದರು.

ಕೇಂದ್ರದಲ್ಲಿನ ಹೊಸ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಗೊಳಿಸಲು ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು. ದೇಶದಲ್ಲಿನ ಮುಸ್ಲಿಂ ಮತ್ತು ಹಿಂದೂಗಳನ್ನು ವಿಭಜಿಸಲು ಮುಂದಾಗಿದ್ದಾರೆ. ಇಂತಹ ಕ್ರಮಗಳ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ. ಈ ದೇಶ ಎಲ್ಲರಿಗೂ ಸಂಬಂಧಿಸಿದ್ದು. ಸಂವಿಧಾನವನ್ನು ಕಾಪಾಡಬೇಕಾಗಿದೆ.

-ಫಾರುಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ

ಬಿಜೆಪಿಗೆ ಪರ್ಯಾಯವಾದ ಪಕ್ಷಗಳನ್ನು ಮತದಾರರು ತಿರಸ್ಕರಿಸಿದ್ದಾರೆ. ನರೇಂದ್ರ ಮೋದಿ ಅವರ ಎರಡನೇ ಬಾರಿ ಗೆಲುವು ಅದೃಷ್ಟವಲ್ಲ ಅಥವಾ ಅಚ್ಚರಿ ಅಲ್ಲ.ಈ ದೇಶವು ಎಲ್ಲರಿಗೂ ಸೇರಿದೆ. ಹೀಗಾಗಿ, ಬಿಜೆಪಿ ನಾಯಕರು ಪ್ರತಿಯೊಬ್ಬರನ್ನು ತಮ್ಮ ಜತೆಗೆ ಕರೆದೊಯ್ಯಲಿ.

-ಒಮರ್ ಅಬ್ದುಲ್ಲಾ,ನ್ಯಾಷನಲ್ ಕಾನ್ಫರೆನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.