ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರೀಕ್ಕರ್ ಅವರ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದಸ್ಪರ್ಧಿಸಲು, ಅವರ ಮಗ ಉತ್ಪಲ್ ಪರ್ರೀಕ್ಕರ್ ಅವರಿಗೆ ಬಿಜೆಪಿ ಅವಕಾಶ ನಿರಾಕರಿಸಿದೆ. ಬದಲಿಗೆ ಮನೋಹರ್ ಅವರ ಆಪ್ತ ಸಿದ್ಧಾರ್ಥ್ ಕುನಕೋಲಿಂಕರ್ ಅವರನ್ನು ಕಣಕ್ಕೆ ಇಳಿಸಲು ಪಕ್ಷವು ನಿರ್ಧರಿಸಿದೆ.

ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮೇ 19ರಂದು ನಡೆಯಲಿದೆ. ಉತ್ಪಲ್ ಮತ್ತು ಸಿದ್ಧಾರ್ಥ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿತ್ತು. ಸಮಿತಿಯು ಸಿದ್ಧಾರ್ಥ್ ಅವರನ್ನು ಆಯ್ಕೆ ಮಾಡಿದೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.

ಉತ್ಪಲ್ ಅವರನ್ನೇ ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಆದರೆ ಪರ್ರೀಕ್ಕರ್ ಅವರ ರಾಜಕೀಯ ಗುರು ಸುಭಾಷ್ ವೆಲಿಂಗಕರ್ ಅವರು ಕಣಕ್ಕೆ ಇಳಿದಿದ್ದಾರೆ. ಅವರು ಆರ್ಎಸ್ಎಸ್ನ ಮಾಜಿ ಕಟ್ಟಾಳು. ಅವರ ಎದುರು ಉತ್ಪಲ್ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಸಿದ್ಧಾರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.