ಕೋಯಿಕ್ಕೋಡ್: ತ್ರಿಶ್ಶೂರ್ ಜಿಲ್ಲಾಧಿಕಾರಿ ಟಿ.ವಿಅನುಪಮಾವಿರುದ್ಧ ಕೇರಳಬಿಜೆಪಿ ವಿಚಾರವಂತರ ಘಟಕದ ಸಂಚಾಲಕ ಟಿ.ಜಿ. ಮೋಹನ್ ದಾಸ್ ಮತೀಯ ದ್ವೇಷದ ಟ್ವೀಟ್ ಮಾಡಿದ್ದಾರೆ.

ತ್ರಿಶ್ಶೂರ್ ಜಿಲ್ಲಾಧಿಕಾರಿ ಎಂದಿಗೂ ಗುರುವಾಯೂರ್ ದೇವಸ್ವಂ ಆಡಳಿತ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಯಾಗಿದ್ದಾರೆ.ಹಾಗಾಗಿ ತ್ರಿಶ್ಶೂರ್ ಜಿಲ್ಲೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದವರನ್ನು ಮಾತ್ರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಬೇಕು.ಅನುಪಮಾ ಕ್ರೈಸ್ತ ಧರ್ಮದವರಾಗಿದ್ದರೆ ಅವರನ್ನು ತಕ್ಷಣವೇ ವರ್ಗ ಮಾಡಿ.

ಅನುಪಮಾ ಕ್ರೈಸ್ತ ಧರ್ಮದವರೇ? ಆಗಿದ್ದರೆ ಗುರುವಾಯೂರ್ ದೇವಸ್ವಂ ಆಡಳಿತ ಸಮಿತಿಯಿಂದ ಈ ನಿಮಿಷವೇ ರಾಜೀನಾಮೆ ನೀಡಿ ಹೊರನಡೆಯಬೇಕು ಎಂದು ಮೋಹನ್ ದಾಸ್ ಟ್ವೀಟಿಸಿದ್ದಾರೆ.

ಶಬರಿಮಲೆ ಅಯ್ಯಪ್ಪನ ಹೆಸರು ಹೇಳಿ ಮತ ಯಾಚಿಸಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿಗೆ ರಿಟರ್ನಿಂಗ್ ಅಧಿಕಾರಿಯಾಗಿರುವ ಅನುಪಮಾ ನೋಟಿಸ್ ನೀಡಿದ್ದರು.ಇದಾದ ನಂತರ ಅನುಪಮಾ ವಿರುದ್ಧ ಫೇಸ್‍ಬುಕ್‍ನಲ್ಲಿ ವಾಗ್ದಾಳಿಗಳು ನಡೆದಿವೆ.

ಜಿಲ್ಲಾಧಿಕಾರಿ ಅನುಪಮಾ ಅವರನ್ನು ವಿರೋಧಿಸಿ ನಟಿ ಅನುಪಮಾ ಅವರ ಫೇಸ್‍ಬುಕ್‍ನಲ್ಲಿ ಕಾಮೆಂಟ್ ದಾಳಿ
ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿಗೆ ತ್ರಿಶ್ಶೂರ್ ಜಿಲ್ಲಾಧಿಕಾರಿ ಟಿ.ವಿ ಅನುಪಮಾ ನೋಟಿಸ್ ನೀಡಿದ್ದಕ್ಕೆ ಸಿಟ್ಟುಗೊಂಡ ಬಿಜೆಪಿ ಬೆಂಬಲಿಗರು ನಟಿ ಅನುಪಮಾ ಪರಮೇಶ್ವರನ್ ಅವರ ಫೇಸ್‍ಬುಕ್ ಪುಟದಲ್ಲಿ ಕೆಟ್ಟ ಕಾಮೆಂಟ್ ಮಾಡಿ ದಾಳಿ ನಡೆಸಿದ್ದಾರೆ.

ನಟಿ ಅನುಪಮಾ ಅವರ ಫೇಸ್‍ಬುಕ್ ಪುಟದಲ್ಲಿ ಕೆಟ್ಟ ರೀತಿಯ ಬೈಗುಳ ಜತೆ ಸ್ವಾಮಿ ಶರಣಂ ಅಯ್ಯಪ್ಪ ಎಂಬ ಕಾಮೆಂಟ್‍ಗಳು ಜಾಸ್ತಿ ಇವೆ.ಸುರೇಶ್ ಗೋಪಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡದಿದ್ದರೆ, ಜಿಲ್ಲಾಧಿಕಾರಿ ಸ್ಥಾನದಿಂದಲೇ ನಿಮ್ಮನ್ನು ಕೆಳಗಿಳಿಸುತ್ತೇವೆ ಬಿಜೆಪಿ ತಂಟೆಗೆ ಬಂದರೆ ಜೋಕೆ ಎಂಬ ಬೆದಿರಿಕೆ ಕಾಮೆಂಟ್‍ಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.