ನವದೆಹಲಿ: ಬಿಜೆಪಿ ಸಿದ್ಧಾಂತದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ, ಸ್ವಜನ ಪಕ್ಷಪಾತದಿಂದ ಅಲ್ಲ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ನವದೆಹಲಿಯಲ್ಲಿ ಭಾನುವಾರ ಬೂತ್ ಕಾರ್ಯಕರ್ತರ ಸಮ್ಮೇಳವನ್ನುದ್ದೇಶಿಸಿ ಮಾತನಾಡಿದ ನಡ್ಡಾ ಅಭಿವೃದ್ಧಿಗಾಗಿ ಕೆಲಸ ಮಾಡುವ ಏಕೈಕ ಪಕ್ಷ ಬಿಜೆಪಿ. ಇತರ ಪಕ್ಷಗಳಲ್ಲಿ ನಾಯಕರಿದ್ದರೆ ಅಲ್ಲಿ ತಂತ್ರಗಾರಿಕೆಇರಲ್ಲ. ಕೆಲವರಿಗೆ ಕೆಲಸ ಮಾಡುವ ಉದ್ದೇಶವೇ ಇರಲ್ಲ. ಅವರೊಂದು ಕಾರ್ಯಕ್ರಮ ಆಯೋಜಿಸಿದರೆಅಲ್ಲಿ ಕಾರ್ಯಕರ್ತರೇ ಇರಲ್ಲ. ಆದರೆ ಬಿಜೆಪಿಗೆ ಮೋದಿಯವರ ನಾಯಕತ್ವ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ, ಬೂತ್ ಮಟ್ಟದಲ್ಲಿಯೂ ಅವರಿಗೆ ಬೆಂಬಲ ಇದೆ ಎಂದಿದ್ದಾರೆ.

ಇದನ್ನೂ ಓದಿ:ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ಮಾಡಿದ ತಿವಾರಿ ದೆಹಲಿಯಲ್ಲಿರುವ ಅನಧಿಕೃತ ಕಾಲೊನಿಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ ಎಂಬ ವಿಷಯ ಕೇಜ್ರಿವಾಲ್‌ಗೆ ತಿಳಿದಿರಲಿ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬಿಜೆಪಿ ಭಾನುವಾರಆರಂಭಿಸಿದ್ದು,ಈ ಅಭಿಯಾನ ಜನವರಿ 15ರಂದು ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.