ನವದೆಹಲಿ: ದೊಡ್ಡ ಗಾತ್ರದ ಸ್ತನಗಳಿಂದ ಕುತ್ತಿಗೆ ನೋವು ಮತ್ತು ನಡೆಯಲು ಕಷ್ಟಪಡುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ನ 60 ವರ್ಷದ ಮಹಿಳೆಗೆ ದೆಹಲಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಎಡ ಸ್ತನದಿಂದ 1.3 ಕೆಜಿ ಅಂಗಾಂಶಗಳನ್ನು ಮತ್ತು ಬಲ ಸ್ತನದಿಂದ 1.4 ಕೆಜಿ ಅಂಗಾಂಶಗಳನ್ನು (ಒಟ್ಟು 2.7 ಕೆಜಿ) ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 12 ರಿಂದ 14 ದಿನಗಳ ನಂತರ ಹೊಲಿಗೆಗಳನ್ನು ತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಹಿಳೆ ಎರಡು ತಿಂಗಳ ಹಿಂದೆ ಸರ್ ಗಂಗಾರಾಮ್ ಆಸ್ಪತ್ರೆಯ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜರಿ ವಿಭಾಗದ ಹಿರಿಯ ಸಲಹೆಗಾರ ರಾಜೀವ್ ಬಿ ಅಹುಜಾ ಅವರನ್ನು ಭೇಟಿಯಾಗಿದ್ದರು.

'ಅತಿಯಾದ ಸ್ತನ ಬೆಳವಣಿಗೆಯಾಗುವ ಗಿಗಾಂಟೊಮಾಸ್ಟಿಯಾ ಅಪರೂಪದ ಸ್ಥಿತಿಯಾಗಿದ್ದು, ಸ್ತನದ ಗಾತ್ರವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಅವುಗಳನ್ನು ಯಶಸ್ವಿಯಾಗಿ ಸುಂದರವಾಗಿ ಕಾಣುವಂತೆಯೂ ಮಾಡುವುದು ನಮ್ಮ ಸವಾಲಾಗಿತ್ತು. ಈ ರೋಗವು ಹಾರ್ಮೋನ್ಳ ಬದಲಾವಣೆಯಿಂದಾಗಿ ಉಂಟಾಗುತ್ತದೆ ಮತ್ತು ಅನೇಕ ಬಾರಿ ಗರ್ಭಾವಸ್ಥೆಯ ನಂತರ ಸ್ತನಗಳು ಸಹಜ ಆಕಾರಕ್ಕೆ ಬರುವುದಿಲ್ಲ' ಎಂದು ರಾಜೀವ್ ಬಿ ಅಹುಜಾ ತಿಳಿಸಿದರು.

ವೈದ್ಯರ ಪ್ರಕಾರ, ಹೆಚ್ಚಿನ ಪ್ರಕರಣಗಳಲ್ಲಿ, ಸ್ತನದ ಒಂದು ಭಾಗವನ್ನು ತೆಗೆದುಹಾಕುವುದರ ಮೂಲಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆದರೆ, ಇದು ಅವುಗಳ ಗಾತ್ರವನ್ನು ಕಡಿಮೆ ಮಾಡುತ್ತದೆಯೇ ಹೊರತು, ಅವುಗಳನ್ನು ಸುಂದರವಾಗಿ ಕಾಣಿಸುವಂತೆ ಮಾಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.