ಜಮ್ಮು: ಖಾಸಗಿ ಬಸ್ ಒಂದು ಸೇತುವೆಯಿಂದ ಉರುಳಿ ಬಿದ್ದು 7 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ಅಮೃತಸರ್–ಕತ್ರಾ ರಸ್ತೆಯಲ್ಲಿ ಇಂದು ನಸುಕಿನ ಜಾವ ನಡೆದಿದೆ.

ಅಮೃತರಸರದಿಂದ ಕತ್ರಾಗೆ ಬರುತ್ತಿದ್ದ ಬಸ್, ಕತ್ರಾ ಬಳಿ ಸೇತುವೆಯಿಂದ ಜಿಗಿದು ತಗ್ಗಿಗೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಸ್ಥಳದಲ್ಲೇ 7 ಜನ ಮೃತಪಟ್ಟಿದ್ದು, 4 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕತ್ರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಿಹಾರದವರು ಎಂದು ಜಮ್ಮುವಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ಸಿಆರ್‌ಪಿಎಫ್ ಪರಿಹಾರ ಕಾರ್ಯಾಚರಣೆ ತಂಡವನ್ನು ಕಳಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಕತ್ರಾ ಸ್ಥಳ ತ್ರಿಕೂಟ ಬೆಟ್ಟಗಳಿಗೆ ಖ್ಯಾತಿಯಾಗಿದ್ದು ಇಲ್ಲಿ ಪ್ರಸಿದ್ಧ ವೈಷ್ಣೋದೇವಿ ಮಂದಿರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.