ನವದೆಹಲಿ:‘ಮಹಾತ್ಮ ಗಾಂಧಿ ಮತ್ತು ಮೊದಲ ಪ್ರಧಾನಿ ಜವಾಹರಲಾಲ್ನೆಹರೂ ದೇಶ ವಿಭಜನೆಯ ಸಂತ್ರಸ್ತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮರ್ಥಿಸಿಕೊಂಡರು.

‘ದೇಶ ವಿಭಜನೆ ಪ್ರಕ್ರಿಯೆಯಲ್ಲಿ ಸಂತ್ರಸ್ತರಾದವರು, ಧರ್ಮದ ಹೆಸರಿನಲ್ಲಿಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತರಿಗಾಗಿ ಈ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದರು.

‘ಎನ್ಆರ್ಸಿ ಯೋಜನೆಯನ್ನು ಪರಿಚಯಿಸಿದ್ದುಕಾಂಗ್ರೆಸ್ ಪಕ್ಷವೇ. 1985ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಅಸ್ಸಾಂನಲ್ಲಿ ಎನ್ಆರ್ಸಿಯನ್ನು ಪರಿಚಯಿಸಿತು. 2003ರಲ್ಲಿ ಈ ನಿರ್ಧಾರವನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿತ್ತು’ ಎಂದು ವಿವರಿಸಿದರು.

‘ದೇಶ ವಿಭಜನೆಯಿಂದ ಸಂತ್ರಸ್ತರಾದವರ ಯೋಗಕ್ಷೇಮ ನೋಡಿಕೊಳ್ಳುವುದು ಭಾರತದ ಹೊಣೆ. ಅವರು ಯಾವಾಗ ಬೇಕಾದರೂ ಭಾರತಕ್ಕೆ ಬರಬಹುದು ಎಂದು ಜವಾಹರ್ಲಾಲ್ ಹೇಳಿದ್ದರು. ವಿಭಜನೆ ಬಯಸದಿದ್ದರುಅದರ ಫಲವನ್ನು ಅವರು ಅನುಭವಿಸಬೇಕಾಯಿತು. ಹಾಗಾಗಿ ಅವರಿಗೆ ಭಾರತದ ಬಾಗಿಲುಸದಾ ತೆರದಿರಬೇಕು ಎನ್ನುವುದು ನೆಹರೂ ಆಶಯವಾಗಿತ್ತು’ ಎಂದರು.

‘ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳು ಮತ್ತು ಸಿಖ್ಖರುಬಯಸಿದಾಗ ಭಾರತಕ್ಕೆ ಬರುವ ಹಕ್ಕಿದೆ ಮತ್ತು ಅವರು ಗೌರವಯುತವಾಗಿ ಬದುಕಲುಭಾರತ ಸರ್ಕಾರ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು1947ರ ಜುಲೈ 7ರಂದು ಮಹಾತ್ಮಗಾಂಧಿ ಹೇಳಿದ್ದರು.

‘ಹಿಂದೆ ವಲಸೆ ಬಂದ ಎಲ್ಲರಿಗೂ ಭಾರತ ನೆಲೆ ನೀಡಿದೆ. ಆದರೆ, ಈಗ ದೇಶದಲ್ಲಿ ಅಷ್ಟುಸಂಪತ್ತು ಇಲ್ಲ. ದೇವರ ದಯೆಯಿಂದ ಅದು ಜಾಸ್ತಿಯಾದರೆ, ನಾವು ಎಲ್ಲರಿಗೂ ಅವಕಾಶ ನೀಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.