ನವದೆಹಲಿ: ಬಿಹಾರದ ಸೋನ್‌ಪುರ– ದೀಘಾ ನಡುವಿನ ಸಂಪರ್ಕಕ್ಕೆ ಗಂಗಾ ನದಿಗೆ ಅಡ್ಡಲಾಗಿ 6 ಪಥದ 4.56 ಕಿ.ಮಿ ಉದ್ದದ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ಇದಕ್ಕೆ ₹2,233.81 ಕೋಟಿ ನಿರ್ಮಾಣ ವೆಚ್ಚ ಸೇರಿ ಒಟ್ಟು ₹3,064.45 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಈ ಸೇತುವೆ ನಿರ್ಮಾಣವಾದರೆ ಸಂಚಾರ ಸುಗಮವಾಗಲಿದೆ. ಇಡೀ ರಾಜ್ಯದ ಅದರಲ್ಲೂ ಉತ್ತರ ಬಿಹಾರದ ಅಭಿವೃದ್ಧಿ ಸುಲಭವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
.ವಿಶೇಷ ಸ್ಥಾನಮಾನ ಪ್ರಸ್ತಾವ: ಕೇಂದ್ರಕ್ಕೆ ಮನವಿ ಸಲ್ಲಿಸಲು ಬಿಹಾರ ಸಂಪುಟ ಒಪ್ಪಿಗೆ.
ಗಂಗಾದ ದಕ್ಷಿಣ ದಂಡೆಯಲ್ಲಿರುವ ದೀಘಾ (ಪಟ್ನಾ ಜಿಲ್ಲೆ) ಹಾಗೂ ಉತ್ತರ ದಂಡೆಯಲ್ಲಿರುವ ಸೋನ್‌ಪುರಕ್ಕೆ (ಸರನ್ ಜಿಲ್ಲೆ) ಈಗ ರೈಲು ಹಳಿ ಮತ್ತು ವಾಹನ ಸಂಚಾರಕ್ಕೆ ರಸ್ತೆ ಇದೆ. ಆದರೆ ಇದರಲ್ಲಿ ಲಘು ವಾಹನ ಮಾತ್ರ ಸಂಚರಿಸಲು ಸಾಧ್ಯ

‘ಸದ್ಯ ಇರುವ ರಸ್ತೆಯಲ್ಲಿ ಸರಕು ಸಾಗಣೆ ಅಸಾಧ್ಯ. ಇದು ದೊಡ್ಡ ಆರ್ಥಿಕ ದಿಗ್ಬಂಧನ. ಎರಡೂ ಪಟ್ಟಣಗಳ ನಡುವೆ ಸೇತುವೆ ನಿರ್ಮಾಣದಿಂದಾಗಿ ಸರಕು ಸಾಗಣೆಗೆ ಇರುವ ಅಡೆತಡೆ ನಿವಾರಣೆಯಾಗಲಿದೆ. ಈ ಭಾಗದ ಆರ್ಥಿಕ ಸಾಮರ್ಥ್ಯ ಹೆಚ್ಚಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
.ಮಹಿಳೆಯರ ಬಗ್ಗೆ ‘ನಿಂದನಾತ್ಮಕ’ ಮಾತು: ಬಿಹಾರ ಸಿಎಂ ವಿರುದ್ಧ ಹರಿಹಾಯ್ದ ಮೋದಿ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಸೇತುವೆ ನಿರ್ಮಾಣ ಮಾಡಲಾಗುವುದು. ನಿರ್ಮಾಣ ಮತ್ತು ಕಾಮಗಾರಿಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪ್ರತಿ ತಿಂಗಳು ಡ್ರೋನ್ ಮೂಲಕ ನಿಗಾ ವಹಿಸಲಾಗುವುದು. 42 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.