ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘಟನೆ ನಾಯಕಿ ಆಯಿಷಿ ಘೋಷ್ ಮತ್ತು ಇತರ 19 ಮಂದಿಯ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮುಸುಕುಧಾರಿಗಳು ಜೆಎನ್ಯು ಕ್ಯಾಂಪಸ್ನಲ್ಲಿಹಿಂಸಾಚಾರ ನಡೆಸುವ ಮುನ್ನಾ ದಿನ,ಜನವರಿ 4ರಂದು ವಿಶ್ವವಿದ್ಯಾಲಯದ ಸರ್ವರ್ ಕೊಠಡಿಯಲ್ಲಿ ದಾಂದಲೆ ನಡೆಸಿದ ಆರೋಪವನ್ನು ಆಯಿಷಿ ಘೋಷ್ ಮತ್ತು ಇತರ 19 ಮಂದಿಯ ಮೇಲೆ ಹೊರಿಸಲಾಗಿದೆಎಂದು ಎನ್ಡಿಟಿವಿ ಜಾಲತಾಣ ವರದಿ ಮಾಡಿದೆ.

ವಿಶ್ವವಿದ್ಯಾಲಯದ ಆವರಣ ಮತ್ತು ವಿವಿಧ ಹಾಸ್ಟೆಲ್ಗಳಲ್ಲಿಜ.5ರಂದು ಪ್ರವೇಶಿಸಿದ್ದ ಮುಸುಕುಧಾರಿಗಳು ವಿದ್ಯಾರ್ಥಿ ಸಂಘಟನೆಯ ನಾಯಕಿ ಆಯಿಷಿಘೋಷ್ ಸೇರಿ, ಹಲವರ ಮೇಲೆ ಹಲ್ಲೆ ನಡೆಸಿದ್ದರು. 34 ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಗಾಯಗೊಂಡಿದ್ದರು.

ಹಿಂಸಾಚಾರ ತಡೆಯಲು ಪೊಲೀಸರು ಸರಿಯಾಗಿ ಪ್ರಯತ್ನಿಸಲಿಲ್ಲ ಎನ್ನುವ ಟೀಕೆ ವ್ಯಾಪಕವಾಗಿ ವ್ಯಕ್ತವಾಗಿತ್ತು. ಜ.6ರಂದು ಹಲವು ದೂರುಗಳನ್ನು ಒಗ್ಗೂಡಿಸಿ ಪೊಲೀಸರು ಒಂದೇ ಎಫ್ಐಆರ್ ಸಿದ್ಧಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.