ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು(ಸಿಬಿಎಸ್ಇ) 10 ಮತ್ತು 12ನೇ ತರಗತಿಯಪರಿಷ್ಕರಿಸಿ ದುಬಾರಿಪರೀಕ್ಷಾ ಶುಲ್ಕ 2020ರಿಂದಲೇ ಜಾರಿಯಾಗಲಿದೆಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದರು.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಪ್ರಶ್ನೆಯೊಂದಕ್ಕೆಉತ್ತರಿಸಿದ ಅವರು, ‘ಲಾಭವೂ ಇಲ್ಲ ನಷ್ಟವೂ ಇಲ್ಲ ಎನ್ನುವ ನಿಯಮದಂತೆ ಸಿಬಿಎಸ್‌ಇ10 ಮತ್ತು 12 ನೇ ತರಗತಿ ಪರೀಕ್ಷಶುಲ್ಕವನ್ನು ಹೆಚ್ಚಿಸಲಾಗಿದೆ’ಎಂದು ಹೇಳಿದರು.

‘ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 50ರಿಂದ ₹1,200ಕ್ಕೆ ಏರಿಸಿದ್ದರೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಏರಿಕೆಯಾಗಿದೆ. ಇದುವರೆಗೂ ₹ 750 ಪಾವತಿಸುತ್ತಿದ್ದ ವಿದ್ಯಾರ್ಥಿಗಳು, ಇನ್ನು ಮುಂದೆ ₹ 1,500 ಪಾವತಿಸಬೇಕಾಗಿದೆ.

‘ಸಿಬಿಎಸ್‌ಇ ಸ್ವಂತ ಆದಾಯದ ಮೇಲೆಯೇ ನಡೆಯುತ್ತಿರುವುದರಿಂದ ಶುಲ್ಕ ಹೆಚ್ಚಳ ಅನಿವಾರ್ಯ’ ಎಂದರು.

ವಲಸೆ ಶುಲ್ಕವನ್ನು ಈ ಮೊದಲು ಇದ್ದ ₹ 150ರಿಂದ ₹ 350ಕ್ಕೆ ಏರಿಸಲಾಗಿದೆ.ಶೇ 100ರಷ್ಟು ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.

ವಿದೇಶಗಳಲ್ಲಿನ ಸಿಬಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿರುವ ವಿದ್ಯಾರ್ಥಿಗಳು, 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಐದು ವಿಷಯಗಳಿಗೆ ₹ 10,000 ಪಾವತಿಸಬೇಕು. ಈ ಮೊದಲು ಈ ಶುಲ್ಕ ₹ 5,000 ಇತ್ತು. ಈ ವಿದ್ಯಾರ್ಥಿಗಳಿಗೆ ಪ್ರತಿ ಹೆಚ್ಚುವರಿ ವಿಷಯಗಳಿಗೆ ಶುಲ್ಕವನ್ನು ₹ 2,000 ಎಂದು ನಿಗದಿಪಡಿಸಲಾಗಿದೆ. ಈ ಮೊದಲು ಈ ಶುಲ್ಕ ₹ 1,000 ಇತ್ತು.

10 ಮತ್ತು 12ನೇ ತರಗತಿ ಪರೀಕ್ಷಾ ಶುಲ್ಕ

ವಿವರ – ಹಾಲಿ ಶುಲ್ಕ – ಪರಿಷ್ಕೃತ ಶುಲ್ಕ

ಪರಿಶಿಷ್ಟರು – ₹ 50 – ₹1,200

ಸಾಮಾನ್ಯ ವರ್ಗ – ₹ 750 – ₹1,500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.