ನವದೆಹಲಿ: ಬಾಲಿವುಡ್ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್, ಹಾಲಿವುಡ್ ನಟ ಚಾಡ್ವಿಕ್ ಬೋಸ್‌ಮನ್, ಅಮೆರಿಕದ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಮೊದಲಾದ ಸೆಲೆಬ್ರೆಟಿಗಳಿಗೆ ಚಂದಾದಾರಿಕೆ ಆಧಾರದ ಬ್ಲೂಟಿಕ್ ‘ಬ್ಲೂ ಟಿಕ್‘ ಗುರುತನ್ನು ಟ್ವಿಟರ್ ಮರುಸ್ಥಾಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಹೇಳಿಕೆ ನೀಡಿದ ಟ್ವಿಟರ್, ‘ಶುಲ್ಕ ಪಾವತಿಸಿದ ಹಿನ್ನೆಲೆಯಲ್ಲಿ ಬ್ಲೂ ಟಿಕ್ ಸೇವೆಯನ್ನು ಮರುಸ್ಥಾಪಿಸಲಾಗಿದೆ. ಖಾತೆಗಳ ಅಸಲಿತನ ಪರಿಶೀಲಿಸಲಾಗಿದ್ದು, ಮೊಬೈಲ್ ಸಂಖ್ಯೆ ಕೂಡ ಅವರದ್ದೇ ಆಗಿರುತ್ತದೆ‘ ಎಂದಿದೆ. ಆದರೆ, ಸುಶಾಂತ್ ಖಾತೆಯ ಶುಲ್ಕ ಯಾರು ಪಾವತಿಸಿದರು ಎಂದು ತಿಳಿದುಬಂದಿಲ್ಲ.

ಬ್ಲೂ ಟಿಕ್ ಪಡೆದಿರುವ ಬಾಲಿವುಡ್‌ನ ದಿವಂಗತ ನಟ ಸುಶಾಂತ್ ಅವರ ಟ್ವಿಟರ್ ಖಾತೆ

ಟ್ವಿಟರ್ ಕಂಪನಿಯು ಆಂಡ್ರಾಯ್ಡ್ ಬಳಕೆದಾರರಿಗೆ 'ಬ್ಲೂ ಟಿಕ್' ಚಂದಾದಾರಿಕೆ ಪಡೆಯಲು ಆಂಡ್ರಾಯ್ಡ್ ಬಳಕೆದಾರರಿಗೆ ಟ್ವಿಟರ್ ಕಂಪನಿಯು ತಿಂಗಳಿಗೆ 11 ಅಮೆರಿಕನ್ ಡಾಲರ್ (₹ 894.96) ಶುಲ್ಕ ನಿಗದಿಮಾಡಿದೆ. ಐಒಎಸ್ ವ್ಯವಸ್ಥೆಯಲ್ಲಿ ಟ್ವಿಟರ್ ಬಳಸುವವರು ಕೂಡ ಇಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ. ಹೊಸ ಆದಾಯದ ಮೂಲ ಸೃಷ್ಟಿಸುವ ಉದ್ದೇಶದಿಂದ ಕಳೆದ ವರ್ಷದಿಂದ ಬ್ಲೂ ಟಿಕ್‌ಗೆ ಶುಲ್ಕ ವಿಧಿಸುವುದನ್ನು ಆರಂಭಿಸಿದ್ದ ಕಂಪನಿಯು, ಬಳಕೆದಾರರಿಗಾಗಿ ಕೊಡುಗೆಯನ್ನೂ ಪ್ರಕಟಿಸಿತ್ತು. ಇದರನ್ವಯ ವಾರ್ಷಿಕ ಚಂದಾದಾರಿಕೆಗೆ ₹6,800 ಶುಲ್ಕ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.