ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಗಳಿಗೆ ತೆರಿಗೆ ಪಾಲು ಹಂಚಿದ ಕೇಂದ್ರ: ಬಿಜೆಪಿ, ಮಿತ್ರಪಕ್ಷಗಳಿಗೆ ಸಿಂಹಪಾಲು

Published : 10 ಅಕ್ಟೋಬರ್ 2024, 10:31 IST
Last Updated : 10 ಅಕ್ಟೋಬರ್ 2024, 11:04 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು ₹1,78,173 ಕೋಟಿಯನ್ನು ಗುರುವಾರ ಬಿಡುಗಡೆಮಾಡಿದೆ.

ಇದರಲ್ಲಿ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6,498 ಕೋಟಿ ಬಿಡುಗಡೆಯಾಗಿದೆ.

ಆಯಾ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ಬಾಕಿ ಇರುವ ನಿಯಮಿತ ಕಂತಿನ ಜೊತೆಗೆ ಒಂದು ಮುಂಗಡ ಕಂತು ಸೇರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಕಲ್ಯಾಣ ಯೋಜನೆಗಳ ವೆಚ್ಚಕ್ಕೆ ಸಹಾಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ₹31,962 ಕೋಟಿ, ರಾಜಸ್ಥಾನಕ್ಕೆ ₹10,737 ಕೋಟಿ, ಮಧ್ಯಪ್ರದೇಶಕ್ಕೆ ₹13,987 ಕೋಟಿ, ಅಸ್ಸಾಂಗೆ ₹5,573 ಕೋಟಿ, ಛತೀಸ್‌ಗಢಕ್ಕೆ ₹6,070, ಗುಜರಾತ್‌ಗೆ ₹6,117 ಕೋಟಿ, ಒಡಿಶಾಗೆ ₹8,068 ಕೋಟಿ ನೀಡಲಾಗಿದೆ.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಬಿಹಾರಕ್ಕೆ ₹17,921 ಕೋಟಿ, ಮಹಾರಾಷ್ಟ್ರಕ್ಕೆ ₹11,255 ಕೋಟಿ, ಆಂಧ್ರಪ್ರದೇಶಕ್ಕೆ ₹7,211 ಕೋಟಿ ನೀಡಲಾಗಿದೆ.

ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳಕ್ಕೆ ₹13,404 ಕೋಟಿ, ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿಗೆ ₹7,268 ಕೋಟಿ, ಎಡರಂಗ ಅಧಿಕಾರದಲ್ಲಿರುವ ಕೇರಳಕ್ಕೆ ₹3,430 ಕೋಟಿ ನೀಡಲಾಗಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕಕ್ಕೆ ₹6,498 ಕೋಟಿ, ತೆಲಂಗಾಣಕ್ಕೆ ₹3,745 ಕೋಟಿ, ಹಿಮಾಚಲಪ್ರದೇಶಕ್ಕೆ ₹1,479 ಕೋಟಿ ಬಿಡುಗಡೆ ಮಾಡಲಾಗಿದೆ.

ರಾಜ್ಯವಾರು ಬಿಡುಗಡೆ ಮಾಡಿದ ಒಟ್ಟು ಮೊತ್ತದ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

PDF
PIB2063773.pdf
ಓಪನ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT