ನವದೆಹಲಿ: ದೇಶದ ನಗರ ಪಾಲಿಕೆಗಳ ವಾರ್ಡ್ಗಳನ್ನು ಆಕರ್ಷಣೀಯವಾಗಿ ರೂಪಿಸಲು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ಸುಂದರ ನಗರದ ಸ್ಪರ್ಧೆಯನ್ನು ಆರಂಭಿಸಿದೆ.

ಗುರುವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ ಸಚಿವಾಲಯ, ‘ಸಾರ್ವಜನಿಕ ಸ್ಥಳಗಳಲ್ಲಿನ ಸಂಪರ್ಕ, ಸವಲತ್ತು, ಚಟುವಟಿಕೆ, ಪರಿಸರ ಹಾಗೂ ಸೌಂದರ್ಯದ ಆಧಾರದಲ್ಲಿ ನಗರಗಳಿಗೆ ಅಂಕ ನೀಡಲಾಗುತ್ತದೆ‘ ಎಂದಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ದೇಶದ ನಗರಗಳು ಹೆಸರು ನೊಂದಾಯಿಸಲು ಜುಲೈ 15 ಅಂತಿಮ ದಿನವಾಗಿರುತ್ತದೆ.

‘ಸ್ಪರ್ಧೆಯು ವಾರ್ಡ್ ಮತ್ತು ನಗರಗಳಲ್ಲಿರುವ ಸುಂದರವಾದ ಸಾರ್ವಜನಿಕ ಸ್ಥಳ ಪ್ರದರ್ಶಿಸಲು ವೇದಿಕೆಯಾಗಿದೆ. ಇದರಿಂದ ಪರಂಪರೆ, ಸಂಸ್ಕೃತಿಗೆ ಉತ್ತೇಜನ ದೊರಕುತ್ತದೆ. ಜೊತೆಗೆ, ಸಮುದಾಯದ ಸುಸ್ಥಿರತೆ ಮತ್ತು ಪರಿಸರ ಕಾಳಜಿ ಉತ್ತೇಜನಗೊಳ್ಳುತ್ತದೆ. ಆದ್ದರಿಂದ, ರಾಜ್ಯ ಮತ್ತು ನಗರಗಳ ನಡುವೆ ಅಧ್ಯಯನಶೀಲತೆ ಹೆಚ್ಚುತ್ತದೆ‘ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.