ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಅಧ್ಯಕ್ಷರನ್ನಾಗಿ ವಿಜಯಾ ಕಿಶೋರ್ ರಹತ್ಕರ್ ಅವರನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ – 1990ರ ಸೆಕ್ಷನ್ 3ರ ಅಡಿಯಲ್ಲಿ ವಿಜಯಾ ಅವರನ್ನು ನೇಮಿಸಲಾಗಿದ್ದು, ಅಧಿಕಾರಾವಧಿ ಮೂರು ವರ್ಷ ಅಥವಾ ಅವರಿಗೆ 65 ವರ್ಷ ಆಗುವವರೆಗೆ ಇರಲಿದೆ' ಎಂದು ತಿಳಿಸಿದೆ.

ವಿಜಯಾ ಅವರ ಅಧಿಕಾರಾವಧಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ನೇಮಕದ ಆದೇಶವು ಭಾರತ ಸರ್ಕಾರದ ಗೆಜೆಟ್ನಲ್ಲಿ ಪ್ರಕಟವಾಗಲಿದೆ ಎಂದಿದೆ.

ವಿಜಯಾ ಅವರನ್ನಷ್ಟೇ ಅಲ್ಲದೆ, ಎನ್ಸಿಡಬ್ಲ್ಯುನ ನೂತನ ಸದಸ್ಯರನ್ನಾಗಿ ಡಾ. ಅರ್ಚನಾ ಮಜುಂದಾರ್ ಅವರನ್ನು ಮೂರು ವರ್ಷದ ಅವಧಿಗೆ ನೇಮಿಸಿರುವುದಾಗಿಯೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
.₹2 ಕೋಟಿ ಸುಲಿಗೆ ಪ್ರಕರಣ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಣ್ಣನ ಬಂಧನ; ಮಗ ವಶಕ್ಕೆ.ಚುನಾವಣೆ: BJP ಟಿಕೆಟ್ ಕೊಡಿಸುವುದಾಗಿ ಹೇಳಿ ಪ್ರಲ್ಹಾದ ಜೋಶಿ ಹೆಸರಿನಲ್ಲಿ ವಂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.