ನವದೆಹಲಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಸಶಸ್ತ್ರ ಗುಂಪುಗಳಿಂದ ಹೊಸದಾಗಿ ನಡೆದಿರುವ ದಾಳಿ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸುಮಾರು 2,000 ಸಿಬ್ಬಂದಿ ಒಳಗೊಂಡ 20 ಹೆಚ್ಚುವರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಎಪಿಎಫ್) ತುಕಡಿಗಳನ್ನು ರಾಜ್ಯಕ್ಕೆ ಕಳುಹಿಸಿದೆ.

ಈ ತುಕಡಿಗಳನ್ನು ತಕ್ಷಣವೇ ನಿಯೋಜನೆ ಮಾಡುವಂತೆ ಗೃಹ ಸಚಿವಾಲಯ ಮಂಗಳವಾರ ರಾತ್ರಿಯೇ ಆದೇಶ ಹೊರಡಿಸಿತ್ತು ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಮಣಿಪುರಕ್ಕೆ ಹೊಸದಾಗಿ ನಿಯೋಜಿತಗೊಂಡಿರುವ 20 ಸಿಎಪಿಎಫ್ ತಕಡಿಗಳಲ್ಲಿ 15 ಸಿಆರ್ಪಿಎಫ್ ತುಕಡಿಗಳು ಮತ್ತು 5 ಗಡಿ ಭದ್ರತಾ ಪಡೆ (ಬಿಎಸ್ಎಫ್) ತುಕಡಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ ಶುರುವಾದ ಜನಾಂಗೀಯ ಹಿಂಸಾಚಾರದಿಂದ 200 ಜನರ ಹತ್ಯೆ ನಡೆದಿದೆ. ಈ ಬೆಳವಣಿಗೆ ನಂತರ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸಿಎಪಿಎಫ್ಗಳ 198 ತುಕಡಿಗಳನ್ನು ಕೇಂದ್ರ ಸರ್ಕಾರ ನಿಯೋಜಿಸಿತ್ತು. ಈಗ ಹೊಸದಾಗಿ ನಿಯೋಜಿಸಲಾದ ತುಕಡಿಗಳು, ಈ ತುಕಡಿಗಳೊಂದಿಗೆ ಸೇರಿ ಕಾರ್ಯನಿರ್ವಹಿಸಲಿವೆ.

ಗೃಹ ಸಚಿವಾಲಯದ ಆದೇಶದಂತೆ ಈ ತುಕಡಿಗಳು ನವೆಂಬರ್ 30ರವರೆಗೆ ಮಣಿಪುರದಲ್ಲಿರಲಿವೆ. ನಿಯೋಜನೆಯನ್ನು ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.