ಅಮರಾವತಿ: ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿ ಮತ್ತು ಏಕೈಕ ರಾಜಧಾನಿಯಾಗಿರಲಿದೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪುನರುಚ್ಚರಿಸಿದ್ದಾರೆ.

ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ಮುಂದೆ ರಾಜಧಾನಿ ವಿಷಯದಲ್ಲಿ ಯಾರಿಗೂ ಆಟ ಆಡಲು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದ್ದಾರೆ.

ಅಮರಾವತಿ ನಮ್ಮ ರಾಜಧಾನಿ, ಮತ್ತೆ ಇದೊಂದೆ ನಮಗೆ ರಾಜಧಾನಿ. ಇನ್ನು ಈ ವಿಷಯದಲ್ಲಿ ಗೊಂದಲ ಇರುವುದಿಲ್ಲ ಎಂದು ಪರೋಕ್ಷವಾಗಿ ವೈಎಸ್ಆರ್ಸಿಪಿಗೆ ಚಾಟಿ ಬೀಸಿದ್ದಾರೆ.

ಜಗನ್ ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ, ಅಮರಾವತಿ, ವಿಶಾಖಪಟ್ಟಣ ಮತ್ತು ಕರ್ನೂಲ್ ಗಳನ್ನು ಆಂಧ್ರಪ್ರದೇಶದ ಮೂರು ರಾಜಧಾನಿಗಳನ್ನಾಗಿ ಮಾಡಲಾಗುವುದು ಎಂದು ಘೋಷಿಸಲಾಗಿತ್ತು.

ಆದರೆ, ಇದಕ್ಕೆ ಆರಂಭದಿಂದಲೂ ಟಿಡಿಪಿ ವಿರೋಧ ವ್ಯಕ್ತಪಡಿಸಿತ್ತು. ಅಮರಾವತಿಯೊಂದೇ ರಾಜಧಾನಿಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದೆ.

ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿತ್ತು. ವಿಧಾನಸಭೆಯ 175 ಸ್ಥಾನಗಳ ಪೈಕಿ ಟಿಡಿಪಿ 135, ಜನಸೇನಾ 21, ಬಿಜೆಪಿ 8 ಹಾಗೂ ವೈಎಸ್ಆರ್ಸಿಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಅದೇ ರೀತಿ 25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16, ವೈಎಸ್ಆರ್ಸಿಪಿ 4, ಬಿಜೆಪಿ 3, ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ನಾಳೆ (ಬುಧವಾರ) ಬೆಳಿಗ್ಗೆ 11.27ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.