ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಅಂತಿಮ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ವೀಕ್ಷಿಸಲಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಈ ಐತಿಹಾಸಿಕ ಪ್ರಕ್ರಿಯೆ ನಡೆಯಲಿದೆ. ಇಸ್ರೊ ಯೋಜನೆಗೆ ಈಗಾಗಲೇ ಶುಭಾಶಯ ಕೋರಿರುವ ಮೋದಿ, ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ನ ನೇರಪ್ರಸಾರ ವೀಕ್ಷಿಸಲಿದ್ದಾರೆ.

ಪ್ರಧಾನಿ ಮೋದಿ ಅವರು 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದ ಜೊಹಾನಸ್ಬರ್ಗ್ ಪ್ರವಾಸ ಕೈಗೊಂಡಿದ್ದಾರೆ.

ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯನ್ನು ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಇದಕ್ಕಾಗಿ ಇಸ್ರೊ ಅಭೂತಪೂರ್ವ ತಯಾರಿಯನ್ನು ನಡೆಸಿದೆ. ದೇಶದ ಜನರು ಮನೆಯಲ್ಲಿಯೇ ಕುಳಿತು ನೇರಪ್ರಸಾರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸುವ ನೇರ ಪ್ರಸಾರವನ್ನು ಇಲ್ಲೂ ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.