ರಾಯಪುರ: ಛತ್ತೀಸಗಢದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು(ಭಾನುವಾರ) ನಡೆಯಲಿದೆ.

ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಹಾಗೂ ಗಿರಿಜನ ಮತ್ತು ಬುಡಕಟ್ಟು ಸಮುದಾಯದ ನಾಯಕರ ನಡುವೆ ಸಿ.ಎಂ ಹುದ್ದೆಗೆ ತೀವ್ರ ಪೈಪೋಟಿ ಇದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಕೇಂದ್ರದ ಮೂವರು ವೀಕ್ಷಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯ ಬಳಿಕ ಹೊಸ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗುವ ನಿರೀಕ್ಷೆಯಿದೆ.

ಮೂವರು ವೀಕ್ಷಕರಾದ ಅರ್ಜುನ್ ಮುಂಡಾ, ಸರ್ವಾನಂದ ಸೋನೊವಾಲ್ ಹಾಗೂ ದುಶ್ಯಂತ್ ಕುಮಾರ್ ಗೌತಮ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವ್ ಶನಿವಾರ ಹೇಳಿದರು.
.ಛತ್ತೀಸಗಢ ವಿಧಾನಸಭೆಗೆ ಆಯ್ಕೆಯಾದ ಶೇ. 80 ಶಾಸಕರು ಕೋಟ್ಯಧೀಶರು.ಛತ್ತೀಸಗಢ | ಹೊಸದಾಗಿ ಆಯ್ಕೆಯಾದ ಶಾಸಕರ ಸಭೆ ನಡೆಸಲಿರುವ ಬಿಜೆಪಿ.
ಒಬಿಸಿಗೆ ಸೇರಿದ ಅರುಣ್ ಸಾವ್, ಒ.ಪಿ. ಚೌಧರಿ ಅವರು ಸಿ.ಎಂ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬುಡಕಟ್ಟು ನಾಯಕರಾದ ಗೋಮತಿ ಸಾಯಿ, ನೇತಾಮ್, ಲತಾ ಉಸೇಂಡಿ ಅವರು ಸಿ.ಎಂ ರೇಸ್‌ನಲ್ಲಿದ್ದಾರೆ.

ಒಬಿಸಿ ಅಥವಾ ಬುಡಕಟ್ಟು ನಾಯಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೂರು ಸಲ ಮುಖ್ಯಮಂತ್ರಿಯಾಗಿದ್ದ ರಮಣ್ ಸಿಂಗ್ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.