ರಾಯಪುರ: ‘ನಕ್ಸಲರು ತಮ್ಮ ಬಗ್ಗೆ ಸಹಾನುಭೂತಿ ಹೊಂದಿರುವವರಿಂದ ಪಡೆಯುತ್ತಿರುವ ಸೈದ್ಧಾಂತಿಕ ಹಾಗೂ ಆರ್ಥಿಕ ಬೆಂಬಲಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಆ ರೀತಿ ಬೆಂಬಲ ನೀಡುವವರನ್ನು ಶೀಘ್ರವೇ ಹತ್ತಿಕ್ಕಲಾಗುತ್ತದೆ’ ಎಂದು ಛತ್ತೀಸಗಡ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

ಅಭಿವೃದ್ಧಿ ಯೋಜನೆಗಳ ಮೂಲಕ ನಕ್ಸಲರಿಗೆ ಕಡಿವಾಣ ಹಾಕಲಾಗುತ್ತಿದ್ದು, ಅವರ ಚಟುವಟಿಕೆಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

‘ನಕ್ಸಲ್ ಸಿದ್ಧಾಂತ ಬೆಂಬಲಿಸುವವರು ರಾಯಪುರದಿಂದ ದೆಹಲಿ ತನಕವೂ ಇದ್ದಾರೆ. ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ತನಕವೂ ಅವರಿಗೆ ಕಾನೂನು ನೆರವು ನೀಡುವ ಸಾಕಷ್ಟು ಜನರಿದ್ದಾರೆ. ಪ್ರಮುಖ ವಕೀಲರು ಅವರ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆನಕ್ಸಲರು ದುರ್ಬಲರಾದಂತೆ ಅವರ ಬೆಂಬಲಿಗರು ಸಹ ದುರ್ಬಲರಾಗಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಕೆಲವರು ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ವಿರೋಧಿಸುತ್ತಾರೆ. ಅಂತಹವರು ನನ್ನ ಬಳಿಯೂ ಬಂದಿದ್ದರು. ಮಾನವ ಹಕ್ಕುಗಳು ನಕ್ಸಲರಿಗೆ ಮಾತ್ರ ಅನ್ವಯಿಸುತ್ತವೆಯೇ, ಸಾಮಾನ್ಯ ಜನರಿಗೆ ಅಲ್ಲವೇ ಎಂದು ನಾನು ಅವರನ್ನು ಕೇಳಿದೆ’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು ಸರ್ಕಾರ 2003ರಿಂದಲೂ ಯೋಜನೆ ಹಮ್ಮಿಕೊಂಡಿದ್ದು, ಅದರ ಫಲಿತಾಂಶ ಕಂಡುಬರುತ್ತಿದೆ’ ಎಂದಿದ್ದಾರೆ.

ಹತ್ಯೆ ಖಂಡಿಸಿ ಬಂದ್
ವಿಶಾಖಪಟ್ಟಣ (ಆಂಧ್ರ ಪ್ರದೇಶ): ಟಿಡಿಪಿ ಶಾಸಕ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಸಿವೇರಿ ಸೋಮ ಅವರ ಹತ್ಯೆ ಖಂಡಿಸಿ ಸೋಮವಾರ ಇಲ್ಲಿ ಬಂದ್ ನಡೆಸಲಾಯಿತು. ಜಿಲ್ಲೆಯ ಲಿಪ್ಪಿಟಿಪುಟ್ಟ ಎಂಬಲ್ಲಿ ಭಾನುವಾರ ನಕ್ಸಲರು ಅವರನ್ನು ಹತ್ಯೆ ಮಾಡಿದ್ದರು.

ನಕ್ಸಲರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಒಡಿಶಾದಲ್ಲಿ ಭಾರಿ ಭದ್ರತೆ: (ಭುವನೇಶ್ವರ ವರದಿ) ನೆರೆಯ ಆಂಧ್ರ ಪ್ರದೇಶದಲ್ಲಿ ನಕ್ಸಲರು ಶಾಸಕ ಹಾಗೂ ಮಾಜಿ ಶಾಸಕರನ್ನು ಹತ್ಯೆ ಮಾಡಿದ ಬಳಿಕ, ಒಡಿಶಾದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ವಿಶೇಷ ಕಾರ್ಯಪಡೆಯನ್ನು (ಎಸ್‌ಜಿಒ) ಸಿದ್ಧಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.