ನವದೆಹಲಿ : ಐಎನ್‌ಎಕ್ಸ್ ಮೀಡಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.ವಿಚಾರಣಾ ನ್ಯಾಯಾಲಯ ವಿಧಿಸಿರುವ 14 ದಿನಗಳ ನ್ಯಾಯಾಂಗ ಬಂಧವವನ್ನೂ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಚಿದಂಬರಂ ಹೊಂದಿರುವ ಸ್ಥಾನ ಮಾನವು ವಿಚಾರಣೆಗೆ ಅಡ್ಡಿ ಮಾಡುವ ಸಾಧ್ಯತೆಯಿದೆ ಎಂದು ಸಿಬಿಐ ಆತಂಕ ವ್ಯಕ್ತಪಡಿಸಿತ್ತು.ಚಿದಂಬರಂ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರವಾಗಿರುವ ಕಾರಣ ಅವರನ್ನು ವಶಕ್ಕೆ ನೀಡಲಾಗುತ್ತಿದೆ ಎಂದು ವಿಚಾ ರಣಾ ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಆರ್ಥಿಕತೆ ಪ್ರಶ್ನಿಸಿದ ಚಿದಂಬರಂ: ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚಿದಂಬರಂ, ಆರ್ಥಿಕ ಕುಸಿತದಿಂದ ಪಾರಾಗಲು ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.ಚಿದಂಬರಂ ಪರವಾಗಿ ಅವರ ಕುಟುಂಬದವರು ಟ್ವೀಟ್ ಮಾಡಿದ್ದಾರೆ. ‘ಅವನತಿಯತ್ತ ಸಾಗು ತ್ತಿರುವ ಇಂಥ ಅರ್ಥ ವ್ಯವಸ್ಥೆ ಸರಿದಾರಿಗೆ ತರಲು ಸರ್ಕಾರದ ಬಳಿ ಯೋಜನೆ ಎಲ್ಲಿದೆ?’ ಎಂದು ಪ್ರಶ್ನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.