ನವದೆಹಲಿ: ಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಪಿ.ಚಿದಂಬರಂ ನೇತೃತ್ವದ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.

ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ.

16 ಸದಸ್ಯರ ಸಮಿತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರೂ ಇದೆ.

ಸಮಿತಿಯಲ್ಲಿ ಛತ್ತೀಸಗಢದ ಟಿ.ಎಸ್.ಸಿಂಗ್ ದೇವ್ ಸಂಚಾಲಕರಾಗಿದ್ದಾರೆ. ಆನಂದ ಶರ್ಮಾ, ಜೈರಾಮ್ ರಮೇಶ್ ಹಾಗೂ ಶಶಿ ತರೂರ್ ಸಮಿತಿಯಲ್ಲಿರುವ ಪ್ರಮುಖರು.

ಪಕ್ಷದ ಹಿರಿಯ ಮುಖಂಡರಾದ ಮಣಿಪುರದ ಗೈಖಂಗಮ್, ಗೌರವ್ ಗೊಗೊಯಿ, ಪ್ರವೀಣ್ ಚಕ್ರವರ್ತಿ, ಇಮ್ರಾನ್ ಪ್ರತಾಪಗರಿ, ಕೆ.ರಾಜು, ಓಂಕಾರ್ ಸಿಂಗ್ ಮಾರ್ಕಮ್, ರಂಜೀತ್ ರಂಜನ್, ಜಿಗ್ನೇಶ್ ಮೇವಾನಿ, ಗುರದೀಪ್ ಸಪ್ಪಲ್ ಸಮಿತಿಯಲ್ಲಿರುವ ಇತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.