ಲಖನೌ: ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಜರುಗುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದು, ಅಪ್ರಾಪ್ತಯ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಚೈಲ್ಡ್ಲೈನ್ ಇಂಡಿಯಾ ತಂಡ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ತೆರಳಿ, ವಧುವಿನ ಪೋಷಕರಿಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ವಿವಾಹ ಸಮಾರಂಭವನ್ನು ಮುಂದುವರೆಸಿದ್ದರು’ ಎಂದು ಪಿಲಿಭಿತ್ನ ಬಾಲ್ಯವಿವಾಹ ನಿಷೇಧ ಅಧಿಕಾರಿ ಪ್ರಗತಿ ಗುಪ್ತಾ ತಿಳಿಸಿದ್ದಾರೆ.

‘ಕಾನೂನಿನ ಪ್ರಕಾರ ವರನ ಕಡೆಯವರ ವಿರುದ್ಧವೂ ದೂರು ದಾಖಲಿಸಲು ಪೊಲೀಸರಿಗೆ ಸಾಕ್ಷ್ಯಗಳನ್ನು ಒದಗಿಸಲು ನಿರ್ಧಾರಿಸಿದ್ದೇವೆ’ ಎಂದು ಗುಪ್ತಾ ಹೇಳಿದ್ದಾರೆ.

ಚೈಲ್ಡ್ಲೈನ್ ತಂಡದ ಸದಸ್ಯ ಪ್ರತುಲ್ ಸಿಂಗ್ ಲಿಖಿತ ದೂರನ್ನು ದಾಖಲಿಸಿದ್ದು, ಬಾಲಕಿಯ ತಂದೆ ಮತ್ತು ತಾಯಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇವನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದ ಇ.ಡಿ

ದೆಹಲಿ| ವಿವಿಧೆಡೆ ಪೊಲೀಸರ ದಾಳಿ, ಮೂವರು ಮಹಿಳಾ ಡ್ರಗ್ಸ್ ದಂಧೆಕೋರರ ಬಂಧನ

ಮಂಗಳೂರು, ಕೊಯಮತ್ತೂರು ಸ್ಫೋಟ: ದಕ್ಷಿಣ ಭಾರತದಲ್ಲಿ 60 ಕಡೆ ಎನ್ಐಎ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.