ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ | ಶಂಕಿತ 'ಚಂಡೀಪುರ ವೈರಸ್‌'; ಜುಲೈ 10ರಿಂದ 6 ಮಕ್ಕಳ ಸಾವು

Published 16 ಜುಲೈ 2024, 6:44 IST
Last Updated 16 ಜುಲೈ 2024, 6:44 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನಲ್ಲಿ ಜುಲೈ 10ರಿಂದ ಶಂಕಿತ 'ಚಂಡೀಪುರ ವೈರಸ್‌' ಸೋಂಕಿನಿಂದಾಗಿ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಋಷಿಕೇಶ ಪಟೇಲ್‌ ತಿಳಿಸಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 12 ರೋಗಿಗಳ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

12 ರೋಗಿಗಳ ಪೈಕಿ ನಾಲ್ವರು ಸಬರ್‌ಕಾಂತ ಜಿಲ್ಲೆಯವರು. ಅರಾವಲ್ಲಿಯಲ್ಲಿ ಮೂರು, ಮಹಿಸಾಗರ ಹಾಗೂ ಖೇಡಾದಲ್ಲಿ ತಲಾ ಒಬ್ಬರು, ರಾಜಸ್ಥಾನ ಮೂಲದ ಇಬ್ಬರು ಮತ್ತು ಮಧ್ಯಪ್ರದೇಶದ ಮೂಲದ ಒಬ್ಬರು ಸೇರಿದ್ದಾರೆ. ಅವರೆಲ್ಲರೂ ಗುಜರಾತ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಶಂಕಿತ ಚಂಡೀಪುರ ವೈರಸ್‌ ಸೋಂಕಿನಿಂದ ಆರು ಸಾವುಗಳು ವರದಿಯಾಗಿವೆ. ಆದರೆ, ವರದಿ ಬಂದ ಬಳಿಕವಷ್ಟೇ ಸಾವು ವೈರಸ್‌ನಿಂದ ಉಂಟಾಗಿದೆಯೇ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.

'ಚಂಡೀಪುರ ವೈರಸ್' ಸೋಂಕು ಸೊಳ್ಳೆ, ಉಣ್ಣೆ, ನೊಣದಿಂದ ಹರಡುತ್ತದೆ. ಜ್ವರ, ತಲೆನೋವು, ಮಿದುಳಿನ ಉರಿಯೂತ ಇದರ ಲಕ್ಷಣಗಳಾಗಿವೆ.

ಸೋಂಕು ಪೀಡಿತ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಈವರೆಗೆ 18,646 ಜನರಿಗೆ ತಪಾಸಣೆ ನಡೆಸಲಾಗಿದೆ. ರೋಗ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆಯು ಶ್ರಮಿಸುತ್ತಿದೆ ಎಂದು ಪಟೇಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT