ನವದೆಹಲಿ: ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಕೇಂದ್ರ ಸರ್ಕಾರ ಆರ್ಥಿಕ ಸಹಾಯ ಘೋಷಿಸಿದೆ. ತಮ್ಮ ಸರ್ಕಾರದ ಎರಡನೇ ವರ್ಷಾಚರಣೆಯ ನಿಮಿತ್ತ ಶನಿವಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಘೋಷಿಸಿದ್ದಾರೆ.

ಇಂಥ ಮಕ್ಕಳ ಹೆಸರಿನಲ್ಲಿ ಸರ್ಕಾರ ನಿಶ್ಚಿತ ಠೇವಣಿ ಇಡಲಿದೆ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ವಾರ್ಷಿಕ ₹5 ಲಕ್ಷದಷ್ಟು ಆರೋಗ್ಯ ವಿಮೆ, 18 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಆರ್ಥಿಕ ನೆರವು, 23 ವರ್ಷ ತುಂಬಿದಾಗ ₹ 10 ಲಕ್ಷ ಹಣಕಾಸಿನ ನೆರವು, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಲಾಗುವುದು ಎಂದುಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಇದನ್ನೂ ಓದಿ:ದೇಶದಲ್ಲಿ 577 ಮಕ್ಕಳನ್ನು ಅನಾಥರನ್ನಾಗಿಸಿದ ಕೋವಿಡ್!

* 10 ವರ್ಷದೊಳಗಿನ ಮಕ್ಕಳಿಗೆ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ದಾಖಲಾತಿ

* 11–18 ವರ್ಷದೊಳಗಿನ ಮಕ್ಕಳಿಗೆ ಕೇಂದ್ರ ಸರ್ಕಾರದ ವಸತಿಸಹಿತ ಸೈನಿಕ ಶಾಲೆ ಅಥವಾ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ

* ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದ್ದಲ್ಲಿ, ಶಿಕ್ಷಣ ಹಕ್ಕು ಕಾಯ್ದೆಯ ಮಾನದಂಡಗಳ ಪ್ರಕಾರ ನಿಗದಿತ ಶುಲ್ಕವನ್ನು ಪಿಎಂ- ಕೇರ್ಸ್ ನಿಧಿಯಿಂದ ನೀಡಲಾಗುವುದು.

* ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನ

* ಹಾಲಿ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಪಡೆಯದ ಮಕ್ಕಳಿಗೆ, ಪಿಎಂ ಕೇರ್ಸ್ ವಿದ್ಯಾರ್ಥಿ ವೇತನ ನೀಡಲಿದೆ

ಮೇ 25ರವರೆಗಿನ ಮಾಹಿತಿ ಪ್ರಕಾರ, ದೇಶದಲ್ಲಿ 577 ಮಕ್ಕಳು ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಕೋವಿಡ್: ತಮಿಳುನಾಡಲ್ಲಿ ಅನಾಥ ಮಕ್ಕಳಿಗೆ ₹ 5 ಲಕ್ಷ ನೆರವು, ಉಚಿತ ಶಿಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.