ಹಾಂಗ್ ಕಾಂಗ್: ಪ್ರಜಾಪ್ರಭುತ್ವ ಹೋರಾಟಗಾರರನ್ನು ನಿಯಂತ್ರಿಸಲು ಬೇಕಾದ ಸಂಪನ್ಮೂಲ ನಮ್ಮಲ್ಲಿ ಇದೆ ಎಂದು ಹಾಂಗ್ ಕಾಂಗ್ ಪೊಲೀಸರು ಹೇಳಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅಧಿಕಾರಿಗಳು ತೀರ್ಮಾನಿಸುತ್ತಾರೆ. ಹಾಗಾಗಿ ಚೀನಾದ ಹಸ್ತಕ್ಷೇಪ ಅಗತ್ಯವಿಲ್ಲ ಎಂದಿದ್ದಾರೆ.

ಹಾಂಗ್ಕಾಂಗ್ ಗಡಿ ಬಳಿ ಶೆಂಝೆನ್ ನಗರದ ಕ್ರೀಡಾಂಗಣದಲ್ಲಿ ಚೀನಾದ ಸಹಸ್ರಾರು ಯೋಧರು ಆಗಸ್ಟ್ 15ರಂದು ಜಮಾವಣೆಗೊಂಡು ಪಥಸಂಚಲನ ನಡೆಸಿದ್ದಾರೆ. ಆದರೆ ಚೀನಾದೊಂದಿಗಿನ ನಿರ್ಧಾರಗಳ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಮೂವರು ಹಿರಿಯ ಕಮಾಂಡರ್ಗಳು ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ಚೀನಾದ ಕಡೆಯಿಂದ ಯಾವುದೇ ನಡೆ ಇದ್ದರೂ ಈ ಬಗ್ಗೆನಗರ ಪೊಲೀಸರಿಗೆ ತಿಳಿದಿಲ್ಲ.
ಈ ಪರಿಸ್ಥಿತಿಯನ್ನು ಸ್ಥಳೀಯ ಪಡೆಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲಎಂಬ ಕಾರಣದಿಂದಲೇ ಈ ವಿಷಯ ಈಗ ಚರ್ಚೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆಯ ಹಂತದ ಬಗ್ಗೆನಮಗೆ ಸಾಕಷ್ಟು ಅರಿವಿದೆ. ಇದನ್ನು ಮುಂದುವರಿಸುವುದಕ್ಕಾಗಿ ನಮ್ಮಲ್ಲಿ ದೃಢ ನಿರ್ಧಾರ, ಒಗ್ಗಟ್ಟು ಮತ್ತು ಸಂಪನ್ಮೂಲಗಳಿವೆ ಎಂದು ಹಿರಿಯ ಕಮಾಂಡರ್ ಹೇಳಿದ್ದಾರೆ.

ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿದ ಈ ಕಮಾಂಡರ್ಗಳು ಅನಾಮಿಕವಾಗಿಯೇ ಉಳಿಯಲು ಇಚ್ಛಿಸಿದ್ದಾರೆ.1960ರ ನಂತರ ಹಾಂಗ್ಕಾಂಗ್ನಲ್ಲಿ ಎದುರಾಗಿರುವ ಪ್ರತಿಭಟನೆ ಬಗ್ಗೆ ಅನಾಮಿಕವಾಗಿದ್ದು ಕೊಂಡು ಮಾತನಾಡಿದರೆ ಹೆಚ್ಚು ಮುಕ್ತವಾಗಿ ಮಾತನಾಡಬಹುದು ಎಂದು ಕಮಾಂಡರ್ಗಳು ಅಭಿಪ್ರಾಯ ಪಟ್ಟಿದ್ದಾರೆ.

ಹಿಂಸಾಚಾರ ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಹಾಂಗ್ಕಾಂಗ್ನಲ್ಲಿ ಕಳೆದ ಒಂಬತ್ತು ವಾರಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ:
ಹಾಂಗ್ಕಾಂಗ್ ಗಡಿಯಲ್ಲಿ ಚೀನಾ ಯೋಧರು
ಹಾಂಗ್ಕಾಂಗ್: ನಿಲ್ಲದ ಪ್ರತಿಭಟನೆ, ಅಶ್ರುವಾಯು
ಹಾಂಗ್ಕಾಂಗ್: ಪ್ರತಿಭಟನೆ ತೀವ್ರ; ವಿಮಾನ ಸಂಚಾರ ಸ್ಥಗಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.