ಪ್ರಯಾಗ್ರಾಜ್: ಪ್ರಯಾಗ್ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲಿ ಗಂಗಾ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಉತ್ತರ ಪ್ರದೇಶ (ಪೂರ್ವ ವಲಯ) ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ನರೇಂದ್ರ ಮೋದಿಯವರ ಚೌಕೀದಾರ್ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಹೆಸರಿನ ಮುಂದೆ ಏನು ಸೇರಿಸಬೇಕೋ ಅದು ಅವರ ಇಚ್ಛೆ.ರೈತ ಸಹೋದರರೊಬ್ಬರು ನನ್ನಲ್ಲಿ ಹೇಳಿದರು, ನೋಡಿ ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ. ನಾವು ರೈತರು, ನಮಗೆ ನಾವೇ ಚೌಕೀದಾರರು.

ಪ್ರಯಾಗ್ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಸುಮಾರು 140 ಕಿ.ಮೀ. ದೋಣಿಯಾನ ನಡೆಸಿ ಮತ ಯಾಚಿಸಲಿರುವ ಪ್ರಿಯಾಂಕಾ, ನದಿ ದಡಗಳಲ್ಲಿ ವಾಸಿಸುತ್ತಿರುವವರೊಡನೆ ಸಂವಾದ ನಡೆಸಿ ಕಾಂಗ್ರೆಸ್ ಮತ ನೀಡುವಂತೆ ಕೋರಲಿದ್ದಾರೆ.

ಮನೈಯಾ ಘಾಟ್ನಿಂದ ಆರಂಭವಾದ ಈ ದೋಣಿಯಾನವಾರಣಾಸಿಯ ಅಸ್ಸಿ ಘಾಟ್ನಲ್ಲಿ ಕೊನೆಗೊಳ್ಳಲಿದೆ.

ಗಂಗಾ ಯಾತ್ರೆ ಆರಂಭಿಸುವ ಮುನ್ನ ಪ್ರಿಯಾಂಕಾ ಅವರು ಬಡೇ ಹನುಮಾನ್ ದೇವಾಲಯ ಮತ್ತು ಪ್ರಯಾಗ್ ರಾಜ್ ಸಂಗಮದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:'ಗಂಗಾ ಯಾತ್ರೆ' ಆರಂಭಿಸಿದ ಪ್ರಿಯಾಂಕಾ ಗಾಂಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.