ಭೋಪಾಲ್: ಅಪರಿಚಿತ ಗುಂಪೊಂದು ಚರ್ಚ್ ಮೇಲೆ ದಾಳಿ ಮಾಡಿ, ಗೋಡೆಯ ಮೇಲೆ ‘ರಾಮ್‘ ಎಂದು ಬರೆದ ಘಟನೆ ಮಧ್ಯಪ್ರದೇಶದ ನರ್ಮದಾಪುರ ಜಿಲ್ಲೆಯ ಚೌಕಿಪುರ ಎನ್ನುವ ಗ್ರಾಮದಲ್ಲಿ ನಡೆದಿದೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ಘಟನೆಯಲ್ಲಿ ಚರ್ಚ್ ಒಳಗಿನ ಪೀಠೋಪಕರಣಗಳು ಸುಟ್ಟು ಹೋಗಿದ್ದು, ಹೊಗೆಯಿಂದಾಗಿ ಗೋಡೆಗಳು ಕಪ್ಪಿಟ್ಟಿವೆ. ಬುಡಕಟ್ಟು ಜನರೇ ಹೆಚ್ಚಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

‘ಐದು ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಚರ್ಚ್ ಇದಾಗಿದ್ದು, ದಾಳಿಕೋರರು ಕಿಟಕಿಗೆ ಅಳವಡಿಸಲಾಗಿದ್ದ ನೆಟ್ ಮುರಿದು ಒಳ ಹೊಕ್ಕಿದ್ದಾರೆ. ಬಳಿಕ ಅಲ್ಲಿರುವ ಪೀಠೋಪಕರಣಗಳಿಗೆ ಬೆಂಕಿ ಇಟ್ಟಿದ್ದಾರೆ. ಇದು ಪ್ರಾಥಮಿಕ ತನಿಖೆಯಿಂದ ಗೊತ್ತಾದ ಮಾಹಿತಿ‘ ಎಂದು ನರ್ಮದಾಪುರಂ ಪೊಲೀಸ್ ವರಿಷ್ಠಾಧಿಕಾರಿ ಗುರುಕರಣ್ ಸಿಂಗ್ ಅವರು ಹೇಳಿದ್ದಾರೆ.

ಘಟನೆಯಲ್ಲಿ ಚರ್ಚ್ ಒಳಗಿದ್ದ ಪೀಠೋಪಕರಣಗಳು, ಧಾರ್ಮಿಕ ಪುಸ್ತಕಗಳು ಸುಟ್ಟು ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.