ನವದೆಹಲಿ: ಸುಪ್ರೀಂಕೋರ್ಟ್ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿಅವರು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಗುರುವಾರ ಪತ್ರ ಬರೆದಿದ್ದು ಸಿಜೆಐಸ್ಥಾನಕ್ಕೆ ಶರದ್ ಅರವಿಂದ್ ಬೊಬ್ಡೆ ಹೆಸರು ಶಿಫಾರಸು ಮಾಡಿದ್ದಾರೆ. ಗೊಗೊಯಿ ಅವರು ಅವರು ನ.17ರಂದು ನಿವೃತ್ತಿಯಾಗಲಿದ್ದಾರೆ.

ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಮುಖ್ಯ ನ್ಯಾಯಮೂರ್ತಿಯಾಗಿ1 ವರ್ಷ 5 ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಅಂದರೆ 2021 ಏಪ್ರಿಲ್ 23ರ ವರೆಗೆ ಅವರ ಸೇವಾ ಅವಧಿ ಇದೆ.

ಇದನ್ನೂ ಓದಿ: ದೇಶದ ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದೆ: ಕಿರುಕುಳ ಆರೋಪಕ್ಕೆ ಸಿಜೆಐ ಪ್ರತಿಕ್ರಿಯೆ

ಇಲ್ಲಿನ ರೀತಿ ನೀತಿಗಳ ಪ್ರಕಾರ ಈಗಿರುವ ಮುಖ್ಯನ್ಯಾಯಮೂರ್ತಿಗಳು ನಿವೃತ್ತಿ ಹೊಂದುವ ಒಂದು ತಿಂಗಳಿಗೆ ಮುನ್ನ ಹಿರಿಯ ನ್ಯಾಯಮೂರ್ತಿರೊಬ್ಬರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಬೇಕು.

ಅಕ್ಟೋಬರ್ 3, 2018ರಂದು 46ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದ ಗೊಗೊಯಿ 2019 ನವೆಂಬರ್ 17ರಂದು ನಿವೃತ್ತಿಹೊಂದಲಿದ್ದಾರೆ.

ಗೊಗೊಯಿ ಅವರು ಮಹತ್ವದ ಪ್ರಕರಣಗಳಾದಅಯೋಧ್ಯೆ ಪ್ರಕರಣ ಮತ್ತು ಅಸ್ಸಾಂನ ಎನ್ಆರ್ಸಿ ಪ್ರಕರಣ ವಿಚಾರಣೆಯ ನೇತೃತ್ವ ವಹಿಸಿದವರಾಗಿದ್ದಾರೆ.

ಅದೇ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೇರಿಸುವಂತೆ ಗೊಗೊಯಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಈ ಮೂರು ವರ್ಷಗಳಲ್ಲಿ ಉತ್ತಮ ನ್ಯಾಯಮೂರ್ತಿಗಳನ್ನು ಹುಡುಕಿ 403 ಖಾಲಿ ಹುದ್ದೆಗಳನ್ನು ತುಂಬಿಸಬಹುದು. ಇದು ನನ್ನ ಕನಸು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಿಸಲು ಮೋದಿಗೆ ಸಿಜೆಐ ಪತ್ರ

ಎಸ್.ಎ. ಬೊಬ್ಡೆ ಕಿರುಪರಿಚಯ
ಎಸ್.ಎ. ಬೊಬ್ಡೆ ಮಧ್ಯಪ್ರದೇಶ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿಗಳು. ಹಿರಿಯ ನ್ಯಾಯಮೂರ್ತಿಗಳಾದ ಇವರು ಹಲವಾರು ಪ್ರಧಾನ ನ್ಯಾಯಪೀಠಗಳ ನೇತೃತ್ವ ವಹಿಸಿದವರಾಗಿದ್ದಾರೆ. ಮಹಾರಾಷ್ಟ್ರ ರಾಷ್ಟೀಯ ಕಾನೂನು ವಿಶ್ವ ವಿದ್ಯಾನಿಲಯ, ಮುಂಬೈ ಮತ್ತು ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ, ನಾಗ್ಪುರ್ನಲ್ಲಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.