ಕೊಚ್ಚಿ: ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮುಗಿದಿದೆ.ಏಪ್ರಿಲ್ 23ರಂದು ಇಲ್ಲಿ ಒಂದೇ ಹಂತದಲ್ಲಿಮತದಾನ ಪ್ರಕ್ರಿಯೆ ಮುಗಿದಿದ್ದು, ಒಂದು ತಿಂಗಳ ಕಾಲ ಇದ್ದ ಚುನಾವಣೆಯ ಅಬ್ಬರ ತಗ್ಗಿದೆ.ಹಾಗಂತ ಇಲ್ಲಿನ ಕೆಲವುರಾಜಕಾರಣಿಗಳು ಸುಮ್ಮನೆ ಕುಳಿತಿಲ್ಲ.ಮತದಾನ ಮುಗಿದ ಮರುದಿನವೇ ತಾವು ಪ್ರಚಾರ ಮಾಡಿದ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.ಚುನಾವಣಾ ಪ್ರಚಾರಕ್ಕಾಗಿ ರಸ್ತೆ ಬದಿ, ಆವರಣ ಗೋಡೆಗಳಲ್ಲಿ ಅಂಟಿಸಿದ್ದ ಪೋಸ್ಟರ್, ಕಟೌಟ್ಗಳನ್ನು ತೆಗೆಯುವುದರಲ್ಲಿ ಈ ರಾಜಕಾರಣಿಗಳು ಬ್ಯುಸಿಯಾಗಿದ್ದಾರೆ. ಇವರಿಗೆ ಪಕ್ಷದ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ.

ಎರ್ನಾಕುಳಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್ಡಿಎಫ್ ಅಭ್ಯರ್ಥಿ ಪಿ.ರಾಜೀವ್ ಅವರ ಬೆಂಬಲಿಗರುಮತದಾನ ಮುಗಿದ ಎರಡೇ ದಿನಗಳಲ್ಲಿ ಅಲ್ಲಿನ ರಸ್ತೆಗಳಲ್ಲಿ ಸ್ಥಾಪಿಸಿದ್ದ ಬೋರ್ಡ್, ಅಂಟಿಸಿದ್ದ ಪೋಸ್ಟರ್ಗಳನ್ನು ಕಿತ್ತು ಸ್ವಚ್ಛಗೊಳಿಸಿದ್ದಾರೆ.ರಾಜೀವ್ ಫೇಸ್ಬುಕ್ನಲ್ಲಿ #LetsCleanErnakulam ಎಂಬ ಅಭಿಯಾನಕ್ಕೆ ಬುಧವಾರಚಾಲನೆ ನೀಡಿದ್ದು, ಎರಡುಗಂಟೆಗಳೊಳಗೆ ಹಲವಾರು ಮಂದಿ ರಸ್ತೆಗಳನ್ನು ಶುಚಿಗೊಳಿಸಿ ಅದರ ಫೋಟೊವನ್ನು ಈ ಹ್ಯಾಶ್ಟ್ಯಾಗ್ನೊಂದಿಗೆ ಶೇರ್ ಮಾಡಿದ್ದಾರೆ.

ಇತ್ತ ಎರ್ನಾಕುಳಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಕಣ್ಣಂತ್ತಾನಂ ಕೂಡಾ ಪ್ರಚಾರ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ತಿರುವನಂತಪುರಂನ ಎನ್ಡಿಎ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಮಾತ್ರ ಇದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ತನಗೆ ಸಿಕ್ಕಿದ ಶಾಲು, ಬಟ್ಟೆಯ ಹಾರಗಳನ್ನು ಮರುಬಳಕೆ ಮಾಡುವುದಾಗಿ ಕುಮ್ಮನಂ ಹೇಳಿದ್ದಾರೆ.

ಉಡುಗೊರೆಯಾಗಿ ನನಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಬಟ್ಟೆ ಸಿಕ್ಕಿದೆ, ಇದರಿಂದ ನಾವು ಬಟ್ಟೆಯ ಚೀಲ, ತಲೆದಿಂಬು ಹೊದಿಕೆ ಮತ್ತು ಇನ್ನಿತರ ವಸ್ತುಗಳನ್ನು ಮಾಡುತ್ತೇವೆ.ಈಗಾಗಲೇ ಇದರ ಬೇರ್ಪಡಿಸುವ ಕಾರ್ಯ ಆರಂಭವಾಗಿದೆ ಎಂದು ಕಮ್ಮನಂ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.ಇದೇಬಟ್ಟೆಗಳಿಂದ ಗ್ರೋ ಬ್ಯಾಗ್ (ಗಿಡ ನೆಡಲು ಪ್ಲಾಸ್ಟಿಕ್ ಕವರ್ ಬದಲು ಬಟ್ಟೆಯ ಬ್ಯಾಗ್) ಮಾಡುವುದಾಗಿ ಕುಮ್ಮನಂ ಹೇಳಿದ್ದು ಅವರ ಈ ಕಾರ್ಯವನ್ನು ನೆಟ್ಟಿಜನ್ಗಳು ಶ್ಲಾಘಿಸಿದ್ದಾರೆ. ಪ್ಲಾಸ್ಟಿಕ್ ಕವರ್ಗಳ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಜನರನ್ನು ಪ್ರೇರೇಪಿಸಬೇಕು ಎಂದಿದ್ದಾರೆ ಕುಮ್ಮನಂ.

ಅಂದಹಾಗೆ ಕೇರಳದಲ್ಲಿ ಚುನಾವಣಾ ಪ್ರಚಾರ ಕೂಡಾ ಪರಿಸರ ಸ್ನೇಹಿ ಆಗಿತ್ತು.ಚುನಾವಣಾ ಪ್ರಚಾಪಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕೆಂದು ಇಲ್ಲಿನ ಜಿಲ್ಲಾಡಳಿತ ಆದೇಶಿಸಿತ್ತು.ರಾಜ್ಯದಾದ್ಯಂತ ವಿವಿಧ ಪಕ್ಷಗಳು ಗೋಡೆಗೆ ಪೋಸ್ಟರ್ ಅಂಟಿಸಿ, ಗೋಡೆ ಬರಹ ಮತ್ತು ಬಟ್ಟೆಯ ಬ್ಯಾನರ್ ಬಳಸಿ ಚುನಾವಣಾ ಪ್ರಚಾರ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.